ಪತ್ರಕರ್ತೆ ಜೊತೆ ಕ್ರಿಸ್ ಗೇಲ್ ಅಸಭ್ಯ ವರ್ತನೆ

ಶನಿವಾರ, 19 ಜುಲೈ 2014 (18:38 IST)
ಮಹಿಳಾ ಪತ್ರಕರ್ತೆಯೊಂದಿಗೆ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅಸಭ್ಯವಾಗಿ ವರ್ತಿಸಿ ವಿವಾದದ ಸುಳಿಯಲ್ಲಿ ಸಿಕ್ಕಿದ್ದಾರೆ. ಕೇರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಜಮೈಕಾ ತಾಲ್ವಾಸ್ ನಾಯಕ ಕ್ರಿಸ್ ಗೇಲ್ ಮತ್ತು ಮಹಿಳಾ ವರದಿಗಾರ್ತಿ ನಡುವೆ ಮಾತುಕತೆ ಸ್ನೇಹಭಾವನೆಯಿಂದ ಕೂಡಿತ್ತು ಎಂದು ಕೆರಿಬಿಯನ್ ಪ್ರೀಮಿಯರ್ ಲೀಗ್ ವರ್ಣಿಸಿದ್ದರೂ, ಇದನ್ನು ಆಂಟಿಗುವಾದ ಮಹಿಳಾ ಹಕ್ಕು ಹೋರಾಟ ತಂಡ 'ಸೆಕ್ಸಿ' ಪ್ರತಿಕ್ರಿಯೆ ಎಂದು ಖಂಡಿಸಿದೆ.

 ವರದಿಗಾರ್ತಿ ಗೇಲ್ ಅವರನ್ನು ತರಬೇತಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ಪಿಚ್ ಹೇಗೆ ವರ್ತಿಸುತ್ತದೆ ಎಂದು ಪ್ರಶ್ನಿಸಿದಾಗ, ಕ್ರಿಸ್ ಗೇಲ್, "ನಾನು ನಿನ್ನದನ್ನು ಮುಟ್ಟಿಲ್ಲ, ಆದ್ದರಿಂದ ಅದು ಹೇಗಿರುತ್ತದೆ ಎಂಬ ಬಗ್ಗೆ ಗೊತ್ತಿಲ್ಲ" ಎಂದು ಅಸಭ್ಯವಾಗಿ ಉತ್ತರಿಸಿದ್ದರು. ಆದರೆ ಈ ಪ್ರತಿಕ್ರಿಯೆಯಿಂದ ಚಿತ್ತಕ್ಷೋಭೆಗೆ ಒಳಗಾಗದ ವರದಿಗಾರ್ತಿ ಅನಿಯಂತ್ರಿತ ನಗೆಯಲ್ಲಿ ಮುಳುಗಿದ್ದಳು. ಆಗ ಗೇಲ್, 'ನಾನು ನಿನ್ನ ನಗೆಯನ್ನು ಇಷ್ಟಪಡುತ್ತೇನೆ' ಎಂದು ಹೇಳಿದ್ದ.

ಸಿಪಿಎಲ್ ವಕ್ತಾರ ಗೇಲ್ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಯಾವುದೇ ದುರುದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಲಿಂಗ ಸಮಾನತೆಯ ಪ್ರತಿಪಾದಿಸುವ ವಕೀಲೆ ಮತ್ತು ವುಮೆನ್ ಏಗೇನಸ್ಟ್ ರೇಪ್ ಮುಖಂಡೆ ಅಲೆಂಕ್ಸಾಂಡ್ರಿನಾ ವಾಂಗ್ ಸಿಪಿಲ್ ನೀಡಿದ ಪ್ರತಿಕ್ರಿಯೆ ಮತ್ತು ಗೇಲ್ ಸೆಕ್ಸಿ ಪ್ರತಿಕ್ರಿಯೆಯನ್ನು ಖಂಡಿಸಿದ್ದು, ಗೇಲ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ