ಬಿಸಿಸಿಐ ಅಧ್ಯಕ್ಷರು ಐಪಿಎಲ್ ತಂಡದ ಮಾಲೀಕರಾಗುವುದು ಹೇಗೆ: ಶ್ರೀನಿವಾಸನ್‌ಗೆ ತರಾಟೆ

ಸೋಮವಾರ, 24 ನವೆಂಬರ್ 2014 (18:36 IST)
ಭಾರತದ ಕ್ರಿಕೆಟ್ ಆಡಳಿತದಲ್ಲಿ  ಹಿತಾಸಕ್ತಿ ಸಂಘರ್ಷದ ಪ್ರಶ್ನೆಯನ್ನು ಎತ್ತಿ,  ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್  ಅವರನ್ನು ಸುಪ್ರೀಂಕೋರ್ಟ್  ತರಾಟೆಗೆ ತೆಗೆದುಕೊಂಡಿರುವುದರಿಂದ ಶ್ರೀನಿವಾಸನ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ನೀವು ಬಿಸಿಸಿಐ ಮತ್ತು ಐಪಿಎಲ್ ನಡುವೆ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ . ಬಿಸಿಸಿಐ ಅಧ್ಯಕ್ಷರು ಐಪಿಎಲ್ ತಂಡದ ಮಾಲೀಕರಾಗಬಹುದೇ,  ಏಕೆಂದರೆ ಐಪಿಎಲ್  ಬಿಸಿಸಿಐ ಉಪಉತ್ಪನ್ನ ಎಂದು ಕೋರ್ಟ್ ತಿಳಿಸಿತು.
 
ತಂಡದ ಮಾಲೀಕತ್ವ ಹಿತಾಸಕ್ತಿ ಸಂಘರ್ಷವನ್ನು ಎತ್ತುತ್ತದೆ. ಬಿಸಿಸಿಐ ಅಧ್ಯಕ್ಷರು ಉಸ್ತುವಾರಿ ವಹಿಸಬೇಕು. ಆದರೆ ನೀವು ಐಪಿಎಲ್ ತಂಡದ ಮಾಲೀಕತ್ವ ಹೊಂದಿರುವುದು ಪ್ರಶ್ನೆಗಳನ್ನು ಮೂಡಿಸುತ್ತದೆ. ಬಿಸಿಸಿಐ ಅಧ್ಯಕ್ಷರಾಗಿ ಇನ್ನೊಂದು ಅವಧಿಗೆ ಶ್ರೀನಿವಾಸನ್ ಮುಂದುವರಿಯುವ ಬಗ್ಗೆ ಉತ್ತರಿಸಿ, ನಿಮ್ಮ ತಂಡದ ನೌಕರರಲ್ಲಿ(ಗುರುನಾಥನ್ ಮೇಯಪ್ಪನ್)  ಒಬ್ಬರು ಬೆಟ್ಟಿಂಗ್‌‍ನಲ್ಲಿ ಭಾಗಿಯಾಗಿದ್ದಾರೆ.

ಇದಕ್ಕೆ ನೀವು ಉತ್ತರಿಸಬೇಕು. ಇದು ಬಿಸಿಸಿಐ ಅಧ್ಯಕ್ಷ ಹುದ್ದೆಯ ಸ್ಥಾನದ ಗೌರವಕ್ಕೆ ಚ್ಯುತಿತರುತ್ತದೆ ಎಂದು ನ್ಯಾಯಾಧೀಶರು ಹೇಳಿದರು. ಅನುಮಾನದ ಅನುಕೂಲ ಆಟದ ಪರವಾಗಿರಬೇಕೇ ಹೊರತು ವ್ಯಕ್ತಿಯ ಪರವಲ್ಲ ಎಂದು ಕೋರ್ಟ್ ತಿಳಿಸಿತು. 
 
ಶ್ರೀನಿವಾಸನ್ ದೇಶದಲ್ಲಿ ಕ್ರಿಕೆಟ್ ಆಟವನ್ನು ದಿವಾಳಿ ಮಾಡುವ ಪ್ರಯತ್ನಕ್ಕೆ ಸಂಯಮ ತೋರಬೇಕು. ದೇಶದಲ್ಲಿ ಕ್ರೀಡೆ ಒಬ್ಬ ವ್ಯಕ್ತಿಗಿಂತ ದೊಡ್ಡದಾಗಿದೆ ಎಂದು ಕೋರ್ಟ್ ತಿಳಿಸಿತು. ಯಾವುದೇ ಹಣಕಾಸಿನ ಪಾಲು ಇಲ್ಲದ ಬೀದಿಯಲ್ಲಿರುವ ಜನಸಾಮಾನ್ಯರಿಗೆ ಈ ಕ್ರೀಡೆ ಧರ್ಮದಂತೆ ಸೆಳೆತ ಹೊಂದಿದೆ ಎಂದು ಕೋರ್ಟ್ ತಿಳಿಸಿತು.

ವೆಬ್ದುನಿಯಾವನ್ನು ಓದಿ