ಸೋಲಿನ ಸುಳಿಯಲ್ಲಿ ಭಾರತ: 224 ರನ್‌ಗಳಿಗೆ ಆಲೌಟ್

ಶನಿವಾರ, 20 ಡಿಸೆಂಬರ್ 2014 (11:14 IST)
ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ನಾಲ್ಕನೇ ದಿನವಾದ ಶನಿವಾರ ಭಾರತ ಶೋಚನೀಯ ಸ್ಥಿತಿಯಲ್ಲಿದ್ದು, ಎಲ್ಲಾ ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದೆ. 
ಒಟ್ಟಾರೆ ಆಸ್ಟ್ರೇಲಿಯಾಕ್ಕೆ ಗೆಲ್ಲಲು 128 ರನ್‌ಗಳು ಬೇಕಾಗಿದೆ. ಒಂದು ವಿಕೆಟ್‌ ಕಳೆದುಕೊಂಡು 71 ರನ್‌ಗಳಿಸಿದ್ದ ಭಾರತ ದಿನದಾಟ ಆರಂಭಿಸಿದಾಗ 6 ವಿಕೆಟ್‌‍ಗಳನ್ನು ಒಂದಾದ ಮೇಲೊಂದರಂತೆ ಕಳೆದುಕೊಂಡಿತು. ಜಾನ್ಸನ್ ಅವರ ಮಾರಕ  ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉರುಳಿದ ಭಾರತದ ಆಟಗಾರರು ಒಬ್ಬರಾದಂತೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.  
 
ಗಾಯಗೊಂಡರು  ಬ್ಯಾಟಿಂಗ್‌ಗೆ ಇಳಿದಿದ್ದ ಶಿಖರ್ ಧವನ್  81 ರನ್ ಗಳಿಸಿ ಗಮನ ಸೆಳೆದರು.
 
ಚೇತೇಶ್ವರ ಪೂಜಾರ(43), ವಿರಾಟ್ ಕೊಹ್ಲಿ(1), ಅಜಿಂಕ್ಯ ರೆಹಾನೆ(10), ರೋಹಿತ್ ಶರ್ಮಾ(0) ಎಲ್ಲರೂ ಪೆವಿಲಿಯನ್ ಹಾದಿ ಹಿಡಿದರು.

ಸ್ಕೋರು: ಭಾರತ 408 ಮತ್ತು 224(ಪೂಜಾರ್ 43, ಧವನ್ 81, ಮುರಳಿ ವಿಜಯ್ 27, ಅಶ್ವಿನ್ 19, ಉಮೇಶ್ ಯಾದವ್ 30 ಮಿಚೆಲ್ ಸ್ಟಾರ್ಕ್ 2/27, ಹ್ಯಾಜಲ್‌ವುಡ್ 2/51 ಮತ್ತು ಮಿಚೆಲ್ ಜಾನ್ಸನ್ 4 ವಿಕೆಟ್ ).

ವೆಬ್ದುನಿಯಾವನ್ನು ಓದಿ