ಕ್ರಿಕೆಟ್ ಅತಿ ಅಪಾಯಕಾರಿ ಆಟ, ಬ್ರಿಯಾನ್ ಲಾರಾ

ಬುಧವಾರ, 26 ನವೆಂಬರ್ 2014 (19:03 IST)
ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಫಿಲ್ ಹ್ಯೂಘ್ಸ್ ಅವರು ಅತಿ ಬೇಗನೆ ಗುಣ ಮುಖರಾಗಲಿ ಎಂದು ಅವರ ಸಾಕಷ್ಟು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದ ವೇಳೆ ಅವರೊಂದಿಗೆ ಪಾಲ್ಗೊಂಡ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಹಾನ್ ಬ್ರಿಯಾನ್ ತಾರಾ, ಕ್ರಿಕೆಟ್ ಎಂಬುದು ಅಪಾಯಕಾರಿ ಆಟವಾಗಿದ್ದು, ಗಂಡಾಂತರ ಎಂಬುದು ಆಟದಲ್ಲಿ ಅಡಗಿದೆ ಎಂದು ಹೇಳಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹ್ಯೂಘ್ಸ್ ಅವರ ಆರೋಗ್ಯ ಸುಧಾರಣೆಗಾಗಿ ಪ್ರಪಂಚದಾದ್ಯಂತ ಇರುವ ಕ್ರಿಕೆಟ್  ಅಭಿಮಾನಿಗಳ ಬೃಹತ್ ಬಳಗವೇ ಪ್ರಾರ್ಥಿಸುತ್ತಿದೆ. ಇಂತಹ ಘಟನೆ ಮತ್ತೆ ಭವಿಷ್ಯದಲ್ಲಿ ಮರುಕಳಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.   
 
ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಗಂಡಾಂತರದಲ್ಲಿಯೇ ಇರುತ್ತಾರೆ. ಹಾಗೆ ಮತ್ತೊಮ್ಮೆ ಆಗಲಿ ಎಂದು ನೀವ್ಯಾರೂ  ಬಯಸುವುದಿಲ್ಲ ಎಂದುಕೊಂಡಿದ್ದೇನೆ ಎಂದು ಲಾರಾ ವಿಶ್ವಾಸ ವ್ಯಕ್ತಪಡಿಸಿದರು.   
 
ಇದು ತುಂಬಾ ನೋವಿನ ವಿಷಯವಾಗಿದ್ದು, ನೀವು ಪ್ರಸ್ತುತ ಗುಣಮುಖರಾಗಲೆಂದು ಪ್ರಾರ್ಥಿಸಬೇಕಷ್ಟೆ. ಆಸ್ಟ್ರೇಲಿಯಾ ಹಾಗೂ ಪ್ರಪಂಚಾದ್ಯಂತ ಇರುವ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಹ್ಯೂಘ್ ಗುಣಮುಖರಾಗಿ, ಆರೋಗ್ಯವಂತರಾಗಿ ಹೊರ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.  
 
ಕ್ರಿಕೆಟ್ ಒಂದು ಕ್ರೀಡೆಯಾಗಿದ್ದು, ಕ್ರೀಡಾಳುಗಳು ಯಾವಾಗಲೂ ಕೂಡ ಗಂಡಾಂತರವನ್ನು ಎದುರಿಸಬೇಕಾಗುತ್ತದೆ. ಇಂತಹ ಸನ್ನಿವೇಶಗಳು ಅತಿ ವಿರಳವಾದರೂ ದುರಾದೃಷ್ಟವೆಂಬಂತೆ ಸಂಭವಿಸುತ್ತವೆ. ಕ್ರಿಕೆಟ್ ಅತಿ ಗಂಡಾಂತರವುಳ್ಳ ಆಟ, ರಗ್ಬೀ ಮತ್ತು ರಗ್ಬೀ ಪಂದ್ಯದಿಂದ ಎಲ್ಲಾ ಪಂದ್ಯಾವಳಿಗಳಲ್ಲಿ ಆಡಿ ಅನುಭವವಿದ್ದು, ಕ್ರಿಕೆಟ್ ಪಂದ್ಯಾವಳಿಗಳು ಮೋಟಾರ್ ರೇಸಿನಂತಿದ್ದು, ಅತಿ ಕ್ಲಿಷ್ಟಕರ ಆಟವಾಗಿವೆ. ಇದರಲ್ಲಿ ಗಂಡಾಂತರ ಎಂಬುದು ಕಟ್ಟಿಟ್ಟ ಬುತ್ತಿ ಎಂದರು. 
 
ಸಿಡ್ನಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಶೆಫೀಲ್ಡ್ ಶೀಲ್ಡ್ ಮ್ಯಾಚ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಲ್ಲಿ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಘ್ ಅವರ ತಲೆಗೆ ಭಯಾನಕ ಪೆಟ್ಟು ಬಿದ್ದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಹ್ಯೂಘ್, ಕೋಮಾ ಸ್ಥಿತಿಗೆ ತಲುಪಿದ್ದು, ಪ್ರಸ್ತುತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ