ಕ್ರಿಕೆಟಿಗ ಫಿಲಿಪ್ ಸಾವು, ಅಭಿಮಾನಿಗಳ ಕಂಬನಿ

ಗುರುವಾರ, 27 ನವೆಂಬರ್ 2014 (12:00 IST)
ಶೆಫೀಲ್ಡ್ ಟ್ರೋಫಿ ಪಂದ್ಯದಲ್ಲಿ ಪಾಲ್ಗೊಂಡಿದ್ದ ವೇಳೆ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಘ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಾವನ್ನಪ್ಪಿದ್ದಾರೆ.

ಗಾಯಗೊಂಡಿದ್ದ ಫಿಲಿಪ್ ಅವರನ್ನು ಇಲ್ಲಿನ ಸೇಂಟ್ ವಿನ್ಸೆಂಟ್ ಅಸ್ಜತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಯನ್ನೂ ಮಾಡಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಂತ್ರಿಕ  ಬ್ರಿಯಾನ್ ತಾರಾ ಸೇರಿದಂತೆ ಪ್ರಪಂಚಾದ್ಯಂತ ಇರುವ ಅವರ ಅಭಿಮಾನಿಗಳು ಹಾಗೂ ಸಹ ಆಟಗಾರರು ಫಿಲಿಪ್ ಗುಣಮುಖರಾಗಿ, ಆರೋಗ್ಯವಂತರಾಗಿ ಹೊರಬರಲೆಂದು ನಿನ್ನೆಯವರೆಗೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. 
 
 
ಆಸಿಸ್ ಪರ 26 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳನ್ನಾಡಿದ್ದ ಫಿಲಿಪ್, ನ. 25ರಂದು ಗಾಯಗೊಂಡಿದ್ದರು. ಇವರ ಸಾವಿಗೆ ಟೀಂ ಇಂಡಿಯಾ ಆಟಗಾರರೂ ಕೂಡ ಕಂಬನಿ ಮಿಡಿದಿದ್ದಾರೆ.  

ವೆಬ್ದುನಿಯಾವನ್ನು ಓದಿ