ಐದು ವಿಕೆಟ್ ಕಬಳಿಸಿದ ಹ್ಯಾಜಲ್‌ವುಡ್, ದಾಖಲೆ ಸಮಗೊಳಿಸಿದ ಹ್ಯಾಡಿನ್ ವಿಕೆಟ್‌ಕೀಪಿಂಗ್

ಗುರುವಾರ, 18 ಡಿಸೆಂಬರ್ 2014 (09:57 IST)
ಆಸ್ಟ್ರೇಲಿಯಾಕ್ಕೆ ಚೊಚ್ಚಲ ಪ್ರವೇಶ ಮಾಡಿರುವ ಹ್ಯಾಜಲ್‌ವುಡ್  5 ವಿಕೆಟ್ ಕಬಳಿಸಿದರು ಮತ್ತು ಬ್ರಾಡ್ ಹ್ಯಾಡಿನ್ ವಿಕೆಟ್ ಕೀಪಿಂಗ್ ದಾಖಲೆಯನ್ನು ಸಮಗೊಳಿಸುವ ಮೂಲಕ ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನಲ್ಲಿ ಭಾಕತವನ್ನು 408 ರನ್‌ಗಳಿಗೆ ಆಲೌಟ್ ಮಾಡಿದೆ. 

ಹ್ಯಾಡಿನ್ ವಾಲಿ ಗ್ರೌಟ್, ಐಯಾನ್ ಹೀಲಿ ಮತ್ತು ರಾಡ್ ಮಾರ್ಶ್ ಹೊಂದಿದ್ದ 6 ಔಟ್‌ಗಳ ದಾಖಲೆಯನ್ನು ಇಂದು ಬೆಳಿಗ್ಗೆ ಇನ್ನೆರಡು ಕ್ಯಾಚುಗಳನ್ನು ಹಿಡಿಯುವ ಮೂಲಕ ಹ್ಯಾಡಿನ್ ಸಮಗೊಳಿಸಿದರು . ಉಮೇಶ್ ಯಾದವ್ ನಾಥನ್ ಲಯನ್ ಬೌಲಿಂಗ್‌ನಲ್ಲಿ ಕ್ರಿಸ್ ರೋಜರ್ಸ್‌ಗೆ ಕ್ಯಾಚಿತ್ತು ಔಟಾದರು.

ಮಹೇಂದ್ರ ಸಿಂಗ್ ಧೋನಿ ಮತ್ತು ಅಶ್ವಿನ್ 7ನೇ ವಿಕೆಟ್‌ಗೆ 57 ರನ್ ಕಲೆಹಾಕಿದರು. ಅಶ್ವಿನ್ ಅವರು ಎದೆಯ ಮಟ್ಟದಲ್ಲಿ ಬಂದ ಚೆಂಡನ್ನು ಬ್ಯಾಟಿಗೆ ತಾಗಿಸಿದ್ದರಿಂದ ಸ್ಲಿಪ್‌ನಲ್ಲಿದ್ದ ಶೇನ್ ವಾಟ್ಸನ್ ಕ್ಯಾಚು ಹಿಡಿದರು. ಧೋನಿ 53 ಎಸೆತಗಳಲ್ಲಿ 33 ರನ್ ಹೊಡೆದು ಹ್ಯಾಜಲ್‌ವುಡ್ ಎಸೆತಕ್ಕೆ ಬಲಿಯಾದರು.

ಆಸ್ಟ್ರೇಲಿಯಾದ ಉತ್ತಮ ಬೌಲರ್ ಆಗಿ ಹ್ಯಾಜಲ್‌ವುಡ್ ಹೊರಹೊಮ್ಮಿ 68 ರನ್ ನೀಡಿ 5 ವಿಕೆಟ್ ಕಬಳಿಸಿದರು.ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ವಾರ್ನರ್ ಅವರು ಯಾದವ್ ಬೌಲಿಂಗ್‌ನಲ್ಲಿ ಅಶ್ವಿನ್ ಅವರಿಗೆ ಕ್ಯಾಚಿತ್ತು ಔಟಾದರು. ಅವರ ಸ್ಕೋರು 28 ಎಸೆತಗಳಿಗೆ 29 ರನ್‌ಗಳಾಗಿವೆ. 

ವೆಬ್ದುನಿಯಾವನ್ನು ಓದಿ