ಗಾಬಾದಲ್ಲಿ ಸೋಲಿನ ದಾಖಲೆಯಿಂದ ನಾವು ಭಯಗೊಂಡಿಲ್ಲ: ಧೋನಿ ಆತ್ಮವಿಶ್ವಾಸ

ಮಂಗಳವಾರ, 16 ಡಿಸೆಂಬರ್ 2014 (15:29 IST)
ಗಾಬಾ ಮೈದಾನದಲ್ಲಿ ಭಾರತದ ಸೋಲಿನ ದಾಖಲೆಯಿಂದ ನಾವು ಆತಂಕಗೊಂಡಿಲ್ಲ ಎಂದು ಧೋನಿ ಮಂಗಳವಾರ ತಿಳಿಸಿದರು. ಆಸ್ಟ್ರೇಲಿಯಾ ವಿರುದ್ದ ಎರಡನೇ ಟೆಸ್ಟ್ ಪಂದ್ಯದ ವೇಗದ ಪಿಚ್‌ನಲ್ಲಿ ಚೆನ್ನಾಗಿ ಆಡುವಂತೆ ತಮ್ಮ ತಂಡವನ್ನು ಧೋನಿ ಹುರಿದುಂಬಿಸಿದರು. ಮುಷ್ಟಿಯ ಮೂಳೆ ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ಧೋನಿ ಗಾಬಾದ ವೇಗದ ಮೈದಾನದಿಂದ ತಮಗೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.

ಗಾಬಾ ಅಥವಾ ಬ್ರಿಸ್ಬೇನ್ ಮೈದಾನದಲ್ಲಿ ಪೇಸ್ ಮತ್ತು ಬೌನ್ಸ್ ಪ್ರವಾಸಿಗಳನ್ನು ದೃತಿಗೆಡಿಸಿ ಆಸ್ಟ್ರೇಲಿಯನ್ನರು ಅಪಾಯಕಾರಿ ಎಂಬುದನ್ನು ಸಾಬೀತು ಮಾಡಿದ್ದಾರೆ. ನೀವು ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಅದು ಸರಿ, ಫಾರತ ಆಡಿದ ಐದು ಟೆಸ್ಟ್‌ಗಳಲ್ಲಿ ಗೆದ್ದಿಲ್ಲ. ಆದರೆ ಅತೀವೇಗದ ಪಿಚ್‌ಗಳಲ್ಲಿ ಭಾರತ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.

ಜೋಹಾನ್ಸ್‌ಬರ್ಗ್, ಡರ್ಬನ್ ಅಥವಾ ಪರ್ತ್ ಯಾವುದೇ ಆಗಿರಲಿ ಅಲ್ಲಿ ಭಾರತ ಟೆಸ್ಟ್ ಪಂದ್ಯ ಗೆದ್ದಿದೆ ಎಂದು ಬ್ರಿಸ್ಬೇನ್‌ನಲ್ಲಿ ಒಂದು ಪಂದ್ಯವನ್ನೂ ಆಡಿರದ ಧೋನಿ ಹೇಳಿದರು.  ಆಸ್ಟ್ರೇಲಿಯಾ ಗಾಬಾ ಟೆಸ್ಟ್‌ನಲ್ಲಿ ಸೋತಿರುವುದು 1988ರಲ್ಲಿ ವಿವಿಯನ್ ರಿಚರ್ಡ್ಸ್ ನಾಯಕತ್ವದ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ನಲ್ಲಿ ಸೋತಿರುವುದು.

ಆದರೆ 2003ರಿಂಚೆಗೆ ಭಾರತ ಆಸ್ಟ್ರೇಲಿಯಾವನ್ನು ಎದುರಿಸಿಲ್ಲ. ಸೌರವ್ ಗಂಗೂಲಿ ಅವರ ಶತಕವು ಪ್ರವಾಸಿಗಳಿಗೆ ಪ್ರಥಮ ಇನ್ನಿಂಗ್ಸ್ ಲೀಡ್ ಒದಗಿಸಿಕೊಟ್ಟು ಡ್ರಾನಲ್ಲಿ ಮುಕ್ತಾಯವಾಗಿದೆ.

ವೆಬ್ದುನಿಯಾವನ್ನು ಓದಿ