ದಿಲ್ಶನ್ ಅವರ ಆಫ್ಸ್ಪಿನ್ ಬೌಲಿಂಗ್ ಪ್ರವಾಸಿಗಳ ಬೆನ್ನೆಲುಬು ಮುರಿಯಿತು. ಮೊಯಿನ್ ಅಲಿ(0), ಅಲೆಕ್ಸ್ ಹೇಲ್ಸ್(7) ಮತ್ತು ಮೋರ್ಗಾನ್ (4) ವಿಕೆಟ್ಗಳನ್ನು ಅವರು ಪಡೆದರು. ಜೋಯಿ ರೂಟ್ ಅತ್ಯಧಿಕ 80 ರನ್ ಗಳಿಸಿದರು. ಆದರೆ ನಾಯಕ ಕುಕ್(32) ಮತ್ತು ಕ್ರಿಸ್ ವೋಕ್ಸ್(34) 30 ರನ್ ದಾಟಿದ ಏಕಮಾತ್ರ ಬ್ಯಾಟ್ಸ್ಮನ್ಗಳು. ನಿಧಾನಗತಿಯ ಪಿಚ್ನಲ್ಲಿ ಪ್ರವಾಸಿಗಳು ನೀರಸ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರಿಂದ ಸೋಲಪ್ಪಿದರು.
ಈ ಜಯದಿಂದ ಶ್ರೀಲಂಕಾ 5-2ರಿಂದ ಸರಣಿ ಗೆದ್ದುಕೊಂಡಿದೆ. ಹಿರಿಯ ಜೋಡಿ ಸಂಗಕ್ಕರಾ ಮತ್ತು ಜಯವರ್ಧನೆ ಕೊನೆಯ ಏಕ ದಿನ ಪಂದ್ಯದಲ್ಲಿ ಮನೋಜ್ಞ ಬ್ಯಾಟಿಂಗ್ನಿಂದ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡರು. ಟೆಸ್ಟ್ ಪಂದ್ಯಗಳಿಂದ ನಿವೃತ್ತರಾಗಿರುವ ಜಯವರ್ದನೆ ವಿಶ್ವ ಕಪ್ ನಂತರ ಸಂಪೂರ್ಣ ನಿವೃತ್ತಿ ಘೋಷಿಸಲಿದ್ದಾರೆ. ಸಂಕಕ್ಕರಾ ಕೂಡ ಈ ಪಂದ್ಯಾವಳಿಯ ಬಳಿಕ ಏಕದಿನ ಪಂದ್ಯದಿಂದ ನಿವೃತ್ತರಾಗಲಿದ್ದಾರೆ.