ಧೋನಿ ಬಾಯ್ಸ್ ಸೋಲು ತಪ್ಪಿಸಲು ಫಾಲ್ಕನ್ ಬ್ಯಾಟ್ ರೆಡಿಯಾಗಿದೆ

ಸೋಮವಾರ, 11 ಆಗಸ್ಟ್ 2014 (19:19 IST)
ಧೋನಿ ಬಾಯ್ಸ್ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಧೂಳಿಪಟವಾಗಿದ್ದಾರೆ. ದೋನಿ ಪಡೆ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುವುದು ಈಗ ಮಾಮೂಲಿಯಾಗಿದೆ. ಹೀಗಾಗಿ 3ನೇ ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ ಧೋನಿ ಬಾಯ್ಸ್ ತುಪ, ತುಪನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಇದೂ ಕೂಡ ಧೋನಿ ಬಾಯ್ಸ್ ಸೋಲಿಗೆ ಮುಖ್ಯ ಕಾರಣವಾಗಿದೆ.  

ಆದರೆ ಸ್ಲಿಪ್ ಕ್ಯಾಚ್ ತಪ್ಪಿಸೋದಕ್ಕೆ ಅಂತಾನೇ ಫಾಲ್ಕನ್ ಬ್ಯಾಟ್ ತಯಾರಿಸಲಾಗಿದೆ. ಈ ಫಾಲ್ಕನ್ ಬ್ಯಾಟ್ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಾಂಬೆ ಐಐಟಿ ಪದವೀಧರರ ತಂಡ ಈ ಬ್ಯಾಟ್ ಆವಿಷ್ಕಾರ ಮಾಡಿದೆ. ಈ ಬ್ಯಾಟ್ ಸಾಮಾನ್ಯ ಬ್ಯಾಟ್‌ಗಳಿಗಿಂತ ವ್ಯತ್ಯಾಸ ಹೊಂದಿದೆ. ಸ್ಲಿಪ್ ಕ್ಯಾಚ್ ತಪ್ಪಿಸೋದಕ್ಕೆ ಅಂತಾನೆ ಬ್ಯಾಟ್ ವಿನ್ಯಾಸ ಮಾಡಲಾಗಿದೆ. ಈ ಬ್ಯಾಟ್‌ಗೆ ಎಂಸಿಸಿ ಅನುಮೋದನೆ ಸಿಕ್ಕಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗರು ಈ ಬ್ಯಾಟ್ ಬಳಸಬಹುದು.

ಫಾಲ್ಕನ್ ಬ್ಯಾಟ್ ವಿಶೇಷತೆ ಏನು ಎನ್ನುವುದನ್ನು ಗಮನಿಸಿದಾಗ ಫಾಲ್ಕನ್ ಬ್ಯಾಟ್ ಮಧ್ಯಭಾಗ ತೆಳುವಾಗಿರುತ್ತದೆ.  ಬ್ಯಾಟ್‌ನ ಮೇಲ್ಬಾಗ ಮತ್ತು ಕೆಳಭಾಗ ಒಂದೇ ರೀತಿಯಲ್ಲಿ ವಿನ್ಯಾಸಹೊಂದಿರುತ್ತದೆ.  ಸಾದಾ ಬ್ಯಾಟ್ ಅಲಗಿಗೆ ಚೆಂಡು ತಗುಲಿದರೆ ಸ್ಲಿಪ್‌ನಲ್ಲಿ ಕ್ಯಾಚ್ ಹೋಗುವ ಸಾಧ್ಯತೆಯಿರುತ್ತದೆ. ಆದರೆ ಫಾಲ್ಕನ್ ಬ್ಯಾಟ್ ಬಳಕೆಯಿಂದ ಸ್ಲಿಪ್‌ನಲ್ಲಿ ಕ್ಯಾಚ್ ಹೋಗುವುದಿಲ್ಲ.

ವೆಬ್ದುನಿಯಾವನ್ನು ಓದಿ