ಐಸಿಸಿ ವಿಶ್ವಕಪ್ 5 ತಿಂಗಳ ಕ್ಷಣಗಣನೆ ಭಾನುವಾರ ಆರಂಭ

ಸೋಮವಾರ, 15 ಸೆಪ್ಟಂಬರ್ 2014 (19:27 IST)
ಒಂದು ಹಂತದಲ್ಲಿ ಮ್ಯೂಸಿಕಲ್ ಚೇರ್‌ನಂತಿದ್ದ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಭಾರತ ಅಗ್ರಸ್ಥಾನದಲ್ಲಿ ಕೊನೆಗೊಂಡಿದ್ದು, 2015ರ ವಿಶ್ವಕಪ್‌ಗೆ 5 ತಿಂಗಳ ಕ್ಷಣಗಣನೆ ಭಾನುವಾರ ಆರಂಭವಾಗಿದೆ.
 
ನಾಲ್ಕು ಅಗ್ರ ಕ್ರಿಕೆಟ್ ರಾಷ್ಟ್ರಗಳ ನಡುವೆ ಕೇವಲ 3 ರೇಟಿಂಗ್ ಪಾಯಿಂಟ್ ಮಾತ್ರ ವ್ಯತ್ಯಾಸವಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಹಆತಿಥ್ಯ ವಹಿಸಿರುವ 50 ಓವರುಗಳ ಕ್ರಿಕೆಟ್ ಹಣಾಹಣಿ ಹೋರಾಟಕ್ಕೆ ವೇದಿಕೆ ಕಲ್ಪಿಸಲಿದೆ. 
 
 ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಕೆಲವು ನಿರ್ಭಯ ಬಿಡುಬೀಸಿನ ಆಟಗಾರರನ್ನು ಹೊಂದಿದ ಭಾರತ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಗಳಿಸಿರುವುದರಿಂದ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗಂಭೀರ ಸ್ಪರ್ಧಿ ಎಂಬಂತೆ ಕಂಡಿದ್ದಾರೆ.
 
 ಕ್ಷೇತ್ರರಕ್ಷಣೆ ಕೂಡ ಸುಧಾರಿಸಿದ್ದು, ಐಪಿಎಲ್ ಕೂಡ ಅದಕ್ಕೆ ನೆರವಾಗಿದ್ದು, ವಿಶ್ವದ ಪ್ರಮುಖ ಬೌಲರುಗಳನ್ನು ಕಾಯಂ ಎದುರಿಸುವ ಅವಕಾಶ ಭಾರತದ ಆಟಗಾರರಿಗೆ ಸಿಕ್ಕಿದೆ.
ಭಾರತ ತಂಡದಲ್ಲಿ ಜೂನಿಯರ್ ಬ್ಯಾಟ್ಸ್‌ಮನ್ ಕೂಡ ಡೇಲ್ ಸ್ಟೈನ್ ಮತ್ತು ಮಿಚೆಲ್ ಜಾನ್ಸನ್ ಬೌಲಿಂಗ್ ಟ್ವೆಂಟಿ 20ಯಲ್ಲಿ ಎದುರಿಸಿದ್ದು, ಅಗತ್ಯಬಿದ್ದಾಗ ಅವರ ಬೌಲಿಂಗ್ ಕೂಡ ಚಚ್ಚುವ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ.
 
 ವೇಗದ ಬೌಲಿಂಗ್ ಮತ್ತು 2011ರ ವಿಶ್ವಕಪ್‌ನಲ್ಲಿ ಕೈಚಳಕ ತೋರಿಸಿದ ಸ್ಪಿನ್ನರುಗಳ ನೆರವಿನಿಂದ ದಾಳಿ ಮಾಡಲು ಭಾರತ ಸಜ್ಜಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬೌನ್ಸಿ ಪಿಚ್‌ಗಳಲ್ಲಿ ಅಶ್ವಿನ್ ಮತ್ತು ಅರೆಕಾಲಿಕ ಸ್ಪಿನ್ನರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆಂಬುದು ಎಲ್ಲವೂ ಅವಲಂಬಿಸಿದೆ. 

ವೆಬ್ದುನಿಯಾವನ್ನು ಓದಿ