ದೃಢಪಟ್ಟ ಮೇಯಪ್ಪನ್ ಧ್ವನಿ ಮಾದರಿ: ಸಂಕಷ್ಟದಲ್ಲಿ ಚೆನ್ನೈ ಐಪಿಎಲ್

ಶುಕ್ರವಾರ, 24 ಅಕ್ಟೋಬರ್ 2014 (18:37 IST)
ಬಿಸಿಸಿಐ ಮಾಜಿ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಅವರ ಧ್ವನಿ ಮಾದರಿಯು ಕದ್ದಾಲಿಸಿದ ಸಂಭಾಷಣೆಯಲ್ಲಿ ದೃಢಪಟ್ಟಿರುವುದರಿಂದ ಚೆನ್ನೈ ಐಪಿಎಲ್ ತಂಡ ಸಂಕಷ್ಟಕ್ಕೆ ಸಿಲುಕಿದೆ.
 
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೇಯಪ್ಪನ್, ವಿಂಧು ದಾರಾಸಿಂಗ್ ಮತ್ತು ಬಂಧಿತರಾದ ಇತರರ ಧ್ವನಿಗಳು ಕದ್ದಾಲಿಸಿದ ಧ್ವನಿಗಳಿಗೆ ಹೋಲಿಕೆಯಾಗುತ್ತದೆ ಎಂದು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಮುದ್ಗಲ್ ಆಯೋಗ ಅಕ್ಟೋಬರ್ 30ರಂದು ತನ್ನ ಅಂತಿಮ ತನಿಖಾ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.ಪ್ರಕರಣದ ಮುಂದಿನ ವಿಚಾರಣೆಯನ್ನು ನ. 10ಕ್ಕೆ ನಿಗದಿಮಾಡಲಾಗಿದೆ.

ಮುದ್ಗಲ್ ಸಮಿತಿಯು ಸುಪ್ರೀಂಕೋರ್ಟ್‌ಗೆ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಸೇರಿದಂತೆ ಅನೇಕ ಅಕ್ರಮಗಳ ವರದಿಯನ್ನು ಫೆ. 10ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು. ಮೇಯಪ್ಪನ್ ವಿರುದ್ಧ ಬೆಟ್ಟಿಂಗ್ ಆರೋಪಗಳು ಸಾಬೀತಾಗಿವೆ ಎಂದು ಮುದ್ಗಲ್ ವರದಿಯಲ್ಲಿ ತಿಳಿಸಲಾಗಿತ್ತು. ಐಪಿಎಲ್ ಪಂದ್ಯಗಳ ಬಗ್ಗೆ ಬುಕ್ಕಿಗಳಿಗೆ ಮಾಹಿತಿ ರವಾನಿಸಿ ಮೇಯಪ್ಪನ್ ಬೆಟ್‌ಗಳನ್ನು ಕಟ್ಟುತ್ತಿದ್ದರು ಎಂದು ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ