ವಿಶ್ವ ಕಪ್‌ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ: ಹರ್ಭಜನ್ ಸಿಂಗ್

ಬುಧವಾರ, 26 ನವೆಂಬರ್ 2014 (17:01 IST)
ವಿಜಯ್ ಹಜಾರೆ ಏಕದಿನ ಪಂದ್ಯದಲ್ಲಿ ರನ್ನರ್ ಅಪ್ ಆಗಲು ಪಂಜಾಬ್ ತಂಡ ಶ್ರಮಿಸುತ್ತಿದ್ದು, ದೇಶದ ನಾಲ್ಕು ಮಂದಿ ಆಫ್ ಸ್ಪಿನ್ನರ್ ಆಟಗಾರರಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಪ್ರಸ್ತುತ ಖುಷಿಯಿಂದಿದ್ದಾರೆ. 2015ರಲ್ಲಿ ನಡೆಯಲಿರುವ ವಿಶ್ವ ಕಪ್ ನಲ್ಲಿ ರಾಷ್ಟ್ರೀಯ ತಂಡವನ್ನು ಮತ್ತೆ ಪ್ರತಿನಿಧಿಸಲು ಉತ್ಸುಕರಾಗಿದ್ದಾರೆ.  
 
 
2011ರಲ್ಲಿ ನಡೆದಿದ್ದ ವಿಶ್ವ ಕಪ್ ಟೂರ್ನಿಯ ಟೀಂ ಇಂಡಿಯಾ ತಂಡದ ಆಟಗಾರರಾಗಿ ಪಾಲ್ಗೊಂಡಿದ್ದ ಹರ್ಭಜನ್, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ನಾನು ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದೇನೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗಳಲ್ಲಿ ಭಾರತ ತಂಡದ ಆಟಗಾರನಾಗಿ ಕಾಣಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ವಿಶ್ವ ಕಪ್ ಎಂಬುದು ಮಹಾ ಪಂದ್ಯಾವಳಿಯಾಗಿದ್ದು, ತಂಡದ ಸೇರ್ಪಡೆ ಕುರಿತಂತೆ ನಾನು ನನ್ನ ಕನಸುಗಳನ್ನು ಜೀವಂತವಾಗಿರಿಸಿದ್ದೇನೆ ಎಂದರು. 
 
ಪ್ರತಿದಿನ ಬೇಗನೆ ಏಳುವ ನಾನು, ಟೇಂ ಇಂಡಿಯಾದಲ್ಲಿ ಸ್ಥಾನ ಪಡೆಯುವ.ಬಗ್ಗೆ ಸಕಾರಾತ್ಮಕವಾಗಿಯೇ ಚಿಂತಿಸುತ್ತೇನೆ. ದೇಶದ ಗೆಲುವುಗಾಗಿ ನನ್ನನ್ನು ನಾನು ಯಾವಾಗಲೂ ಕೂಡ ಉತ್ತಮ ಪ್ರದರ್ಶನ ತೋರಲು ಪ್ರೇರೇಪಿಸಿಕೊಳ್ಳುತ್ತಿರುತ್ತೇನೆ. ಅದೇ ರೀತಿ ವಿಶ್ವ ಕಪ್ ನಲ್ಲಿ ನಾನು ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವ ಕಪ್ ತಂಡಕ್ಕೆ ಮರಳಿ ಬರುವ ವಿಶ್ವಾಸ ವ್ಯಕ್ತಪಡಿಸಿದರು. 
 
ನನ್ನ ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ಪಂಜಾಬ್ ತಂಡ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದಕ್ಕೆ ಸಂತಸವಿದೆ. ಪಂಜಾಬ್ ತಂಡದ ಕ್ರಿಕೆಟಿಗರು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದಕ್ಕೆ ನನಗೆ ಹೆಮ್ಮೆಯೂಯಿದೆ. ಆದರೆ, ದುರಾದೃಷ್ಟದಿಂದಾಗಿ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದರು.
 
ಆಸ್ಟ್ರೇಲಿಯಾ ವಿರುದ್ಧ 2013ರ ಮಾರ್ಚ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಪಂದ್ಯವನ್ನಾಡಿದ್ದ ಹರ್ಭಜನ್, ಪ್ರಸ್ತುತ ನಿರಂತರವಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣುವ ವಿಶ್ವಾಸವಿದೆ ಎಂದುತಿಳಿಸಿದ್ದಾರೆ. 
 
ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಕರ್ನಾಟಕ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಪಂದ್ಯದಲ್ಲಿ ಪಂಜಾಬ್ ಪರ ಹರ್ಭಜನ್ ಉತ್ತಮ ಬೌಲಿಂಗ್ ಮಾಡುವ ಮೂಲಕ ಪ್ರೇಕ್ಷಕರ, ಆಯ್ಕೆ ಸಮಿತಿಯ ಗಮನ ,ಸೆಳೆಯುವಲ್ಲಿ ಸಫಲರಾದರು.  

ವೆಬ್ದುನಿಯಾವನ್ನು ಓದಿ