ತೀರ್ಪಿಗೆ ಮೇಲ್ಮನವಿ ಸಲ್ಲಿಸಬೇಕೆಂಬ ಬಿಸಿಸಿಐ ಮನವಿಗೆ ಐಸಿಸಿ ತಿರಸ್ಕಾರ

ಬುಧವಾರ, 6 ಆಗಸ್ಟ್ 2014 (16:23 IST)
ಇಂಗ್ಲೆಂಡ್ ಆಟಗಾರ ಜೇಮ್ಸ್ ಆಂಡರ್‌ಸನ್ ಅವರು ನಿರ್ದೋಷಿ ಎಂದು ತೀರ್ಪು ನೀಡಿದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಐಸಿಸಿ ನಿರ್ಧರಿಸಿದೆ.ಈ ಫಲಿತಾಂಶ ಎರಡು ಆಮೂಲಾಗ್ರ ಶಿಸ್ತು ಪ್ರಕ್ರಿಯೆಗಳ ಫಲವಾಗಿ ಬಂದಿದೆ.ಲಿಖಿತ ತೀರ್ಪನ್ನು ಪರಿಶೀಲಿಸಿದ ಬಳಿಕ ಐಸಿಸಿಗೆ ನಿರ್ಧಾರ ಕೈಗೊಂಡ ರೀತಿಯ ಬಗ್ಗೆ ತೃಪ್ತಿಯಾಗಿದೆ.

ಸುಮಾರು 14 ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದು, ಗೋರ್ಡನ್ ಲೂವಿಸ್ ಅವರ ತೀರ್ಪನ್ನು ಪರಿಗಣಿಸಿ ಮತ್ತಷ್ಟು ಮೇಲ್ಮನವಿ ವಿಧಾನಗಳ ಮೂಲಕ ಪ್ರಕ್ರಿಯೆಯನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ ಎಂದು ಬಾವಿಸಿದ್ದಾಗಿ ಐಸಿಸಿ ತಿಳಿಸಿದೆ. 
 
ಇಂಗ್ಲೆಂಡ್ ಆಟಗಾರ ಆಂಡರ್‌ಸನ್ ಅವರಿಗೆ ಕ್ಲೀನ್ ಚಿಟ್ ನೀಡಿದ ತೀರ್ಪನ್ನು ಪರಿಶೀಲಿಸುವಂತೆ ಬಿಸಿಸಿಐ ನೀಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದ್ದರಿಂದ ಬಿಸಿಸಿಐಗೆ ಮುಖಭಂಗವಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಆಂಡರ್‌ಸನ್ ಮತ್ತು ರವೀಂದ್ರ ಜಡೇಜಾ ನಡುವೆ ವಾಗ್ವಾದ ನಡೆದ ಸಂದರ್ಭದಲ್ಲಿ ಆಂಡರ್‌ಸನ್ ತಮ್ಮನ್ನು ಅವಾಚ್ಯವಾಗಿ ಬೈಯ್ದು ದೂಡಿದ್ದಾರೆಂದು ಜಡೇಜಾ ಆಪಾದಿಸಿದ್ದರು.

ಈ ಕುರಿತು ಇಬ್ಬರಿಗೂ ಕ್ಲೀನ್ ಚಿಟ್ ನೀಡಿ ತೀರ್ಪು ನೀಡಲಾಗಿತ್ತು. ಆದರೆ ಈಗ ತೀರ್ಪನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. 

ವೆಬ್ದುನಿಯಾವನ್ನು ಓದಿ