ನಾಯಕತ್ವ ತ್ಯಜಿಸುವುದಕ್ಕೆ "ಕಾದು ನೋಡಿ" : ಧೋನಿ ಉತ್ತರ

ಸೋಮವಾರ, 18 ಆಗಸ್ಟ್ 2014 (14:59 IST)
ವಿದೇಶಿ ನೆಲದಲ್ಲಿ ಭಾರತ ತಂಡದ ಮತ್ತೊಂದು ಸರಣಿ ಸೋಲಿನ ಹಿನ್ನೆಲೆಯಲ್ಲಿ ನಾಯಕತ್ವ ತ್ಯಜಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಕಾದುನೋಡಿ ಎಂದು ನಾಯಕ ಧೋನಿ ಹೇಳಿದ್ದಾರೆ.ನೀವು ರಾಜೀನಾಮೆಗೆ ಪರಿಶೀಲಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ನಾನು ಈ ನಷ್ಟವನ್ನು ನಿಭಾಯಿಸುವಷ್ಟು ಶಕ್ತಿಯನ್ನು ಹೊಂದಿದ್ದೇನೆಯೇ ಎಂದು ಕಾದುನೋಡಿ ಎಂದು ಹೇಳಿದರು.  ಪಂದ್ಯದ ನಂತರ ಭಾರತದ ಬ್ಯಾಟಿಂಗ್ ಆರ್ಡರ್ ವಿಫಲವಾಗಿದ್ದನ್ನು ಈ ಪಂದ್ಯ ಪ್ರತಿಫಲಿಸಿದೆ ಎಂದು ಧೋನಿ ಹೇಳಿದರು.

ಮುರಳಿ ವಿಜಯ್ ಚೆನ್ನಾಗಿ ಆಡಿದ್ದಾರೆ. ಆದರೆ ಆರಂಭಿಕ ಜೊತೆಯಾಟ ಉತ್ತಮವಾಗಿ ಮೂಡಿಬರಲಿಲ್ಲ ಎಂದು ನುಡಿದರು.  ನಾವು ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಹೋರಾಟ ನೀಡಿಲ್ಲದಿರುವುದಕ್ಕೆ ನಿರಾಶೆಯಾಗಿದೆ. ಬ್ಯಾಟ್ಸ್‌ಮನ್‌ಗಳು ಈ ಸೋಲಿನಿಂದ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಉತ್ತಮವಾಗಿ ಆಡುವರೆಂದು ಆಶಿಸುವುದಾಗಿ ತಿಳಿಸಿದರು. ಆದರೆ ಧೋನಿ ಏನೇ ಹೇಳಿದರೂ ಅವರ ನಾಯಕತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.

ಅವರು ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊಮ್ಮಿದರೂ, ನಾಯಕತ್ವದ  ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. 2011ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ 8-0ಯಿಂದ ಸೋತಿದೆ ಮತ್ತು 2013-14ರಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಸರಣಿಯಲ್ಲಿ ಸೋಲಪ್ಪಿದೆ. 

ವೆಬ್ದುನಿಯಾವನ್ನು ಓದಿ