ಮೊದಲ ಟೆಸ್ಟ್ ಡ್ರಾಗೆ ಭಾರತದ ಹೋರಾಟ: 2 ವಿಕೆಟ್‌ಗೆ 205 ರನ್

ಶನಿವಾರ, 13 ಡಿಸೆಂಬರ್ 2014 (09:50 IST)
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಭಾರತ ಹೋರಾಟ ನಡೆಸಿದ್ದು, 2 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿದೆ. ಬೌನ್ಸರ್ ಎಸೆತಗಳನ್ನು ಎದುರಿಸುವಲ್ಲಿ ಶಿಖರ್ ಧವನ್ ದೌರ್ಬಲ್ಯವನ್ನು ಅರಿತಿದ್ದ ಮಿಚೆಲ್ ಜಾನ್ಸನ್, ಫ್ಲೈಯರ್ ಎಸೆದಾಗ ಚೆಂಡಿನ ದಾರಿಯಿಂದ ದೂರವುಳಿಯಲು ಭಾರತದ ಓಪನರ್ ಯತ್ನಿಸಿದರು.

ಆದರೆ ಚೆಂಡು ಅವನ ಬ್ಯಾಟ್ ತುದಿಗೆ ತಾಗಿ ಹ್ಯಾಡಿನ್‌ಗೆ ಕ್ಯಾಚಿತ್ತರು. ಜಾನ್ಸನ್ ಅಪೀಲಿಗೆ ಸ್ಪಂದಿಸಿದ ಅಂಪೇರ್  ಔಟ್ ನೀಡಿದ್ದರಿಂದ ಭಾರತ ನೀರಸ ಆರಂಭ ಕಂಡಿತು. ವಿಜಯ್ ಜೊತೆಗೆ 41 ರನ್ ಜೊತೆಯಾಟವಾಡಿದ್ದ ಚೇತೇಶ್ವರ್ ಪೂಜಾರ ವಿಕೆಟ್ ಕೀಪರ್ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾದರು. ಅವರ ಸ್ಕೋರು 21 ರನ್‌ಗಳಾಗಿತ್ತು.

ನಂತರ ಆಡಲಿಳಿದ ನಾಯಕ ವಿರಾಟ್ ಕೊಹ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ ಮತ್ತು ಮುರಳಿ ವಿಜಯ್ 73  ರನ್‌ಗಳಿಸಿ ಅಜೇಯರಾಗಿ ಆಟ ಮುಂದುವರಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 290 ಸ್ಕೋರ್ ಮಾಡಿದ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಿಸಿ ಭಾರತಕ್ಕೆ 364 ರನ್ ಸವಾಲನ್ನು ಒಡ್ಡಿದೆ.

ಭಾರತ ಈಗ ಪಂದ್ಯವನ್ನು ಗೆಲ್ಲುವ ಮಾತಿರಲಿ ಡ್ರಾ ಮಾಡಿಕೊಳ್ಳಲು ವಿಕೆಟ್‌ಗಳನ್ನು ಕಳೆದುಕೊಳ್ಳದೇ ಹೆಣಗಾಡಬೇಕಾಗಿದೆ. ಮುರಳಿ ವಿಜಯ್ ನಿಧಾನಗತಿಯಲ್ಲಿ ಸ್ಕೋರ್ ಕಲೆಹಾಕಿದರೂ, ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ 98 ಎಸೆತಗಳಿಗೆ 68 ರನ್ ಕಲೆಹಾಕಿದರು. ಭಾರತ ಈಗ ಕನಿಷ್ಠ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿದ್ದು, ಔಟಾಗದೇ ವಿಕೆಟ್‌ನಲ್ಲಿ ನಿಂತು ಆಡಬೇಕಿದೆ.
 

ವೆಬ್ದುನಿಯಾವನ್ನು ಓದಿ