ಬ್ರಿಸ್ಬೇನ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಭಾರತ

ಬುಧವಾರ, 17 ಡಿಸೆಂಬರ್ 2014 (18:23 IST)
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಾಗ ಭಾರತ 311ಕ್ಕೆ 4 ವಿಕೆಟ್ ಕಳೆದುಕೊಂಡು ಉತ್ತಮ ಮೊತ್ತವನ್ನು ಕಲೆಹಾಕಿದೆ.

ಮುರಳಿ ವಿಜಯ್ ಅವರು 144 ರನ್‌ಗಳ ಅಮೋಘ ಶತಕದ ಬಳಿಕ ಅಜಿಂಕ್ಯ ರೆಹಾನೆ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟವಾಡಿದ್ದು ರಹಾನೆ ಅಜೇಯ 75 ರನ್ ಮಾಡಿದ್ದರೆ, ರೋಹಿತ್ ಶರ್ಮಾ ಅಜೇಯ 26 ರನ್ ಗಳಿಸಿದ್ದಾರೆ. ಮುರಳಿ ವಿಜಯ್ ಸ್ಕೋರಿನಲ್ಲಿ 22 ಬೌಂಡರಿಗಳಿದ್ದವು. ಕೊಹ್ಲಿ ಮತ್ತು ಪೂಜಾರ ಕ್ರಮವಾಗಿ 19 ಮತ್ತು 18 ರನ್ ಗಳಿಸಿ ಔಟಾಗಿದ್ದಾರೆ. ನಿಗದಿತ 90 ಓವರುಗಳಿಗೆ ಬದಲಾಗಿ ನಿಧಾನಗತಿಯ ಬೌಲಿಂಗ್‌ನಿಂದಾಗಿ 7 ಓವರ್ ಕಡಿಮೆಯಲ್ಲಿ ದಿನದಾಟ ಮುಕ್ತಾಯವಾಯಿತು.

ಭಾರತ ಶಮಿ, ವೃದ್ದಿಮಾನ್ ಸಹಾ ಮತ್ತು ಕರ್ಣ್ ಶರ್ಮಾ ಬದಲಿಗೆ ಉಮೇಶ್ ಯಾದವ್, ಧೋನಿ ಮತ್ತು ಅಶ್ವಿನ್ ಅವರು ಆಡಲಿಳಿದಿದ್ದಾರೆ. ಆಸ್ಟ್ರೇಲಿಯಾ ಹ್ಯಾಜಲ್‌ವುಡ್, ಮಾರ್ಶ್ ಮತ್ತು ಸ್ಟಾರ್ಕ್ ಅವರನ್ನು ಆಡಿಸಿದೆ.ರಹಾನೆ ಮತ್ತು ವಿಜಯ್ ನಾಲ್ಕನೇ ವಿಕೆಟ್‌ಗೆ 124 ರನ್ ಜೊತೆಯಾಟವಾಡಿದ್ದು ಭಾರತಕ್ಕೆ ಮೇಲುಗೈ ತಂದಿದೆ. 

ವೆಬ್ದುನಿಯಾವನ್ನು ಓದಿ