ಭಾರತ, ಪಾಕ್ ವಿಶ್ವ ಕಪ್ ಪಂದ್ಯ ಒಂದು ಶತಕೋಟಿ ಜನರಿಂದ ವೀಕ್ಷಣೆ ನಿರೀಕ್ಷೆ

ಮಂಗಳವಾರ, 13 ಜನವರಿ 2015 (18:51 IST)
ಕಡು ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಅಡೆಲೈಡ್‌ನಲ್ಲಿ ಫೆಬ್ರವರಿ 15ರಂದು ನಡೆಯುವ ವಿಶ್ವಕಪ್ ಪಂದ್ಯವನ್ನು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮಂದಿ ವೀಕ್ಷಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ.

ಸುಮಾರು ಒಂದು ಶತಕೋಟಿಗಿಂತ ಹೆಚ್ಚು ಜನರನ್ನು ಈ ಪಂದ್ಯ ಆಕರ್ಷಿಸುತ್ತದೆಂದು ನಿರೀಕ್ಷಿಸಲಾಗಿದೆ. 2011ರಲ್ಲಿ  ಮೊಹಾಲಿಯಲ್ಲಿ ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆದ  ವಿಶ್ವಕಪ್ ಪಂದ್ಯವನ್ನು 988 ದಶಲಕ್ಷ ಜನರು ವೀಕ್ಷಿಸಿದ್ದರು ಎಂದು ಆಸ್ಟ್ರೇಲಿಯಾದ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ಈ ಬಾರಿಯ ಪಂದ್ಯ ಆರು ತಿಂಗಳ ಮುಂಚಿತವಾಗಿಯೇ ಸೋಲ್ಡ್ ಔಟ್ ಆಗಿದ್ದು, ಆಸ್ಟ್ರೇಲಿಯಾದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಕ್ಕಿಂತ ಇದು ಭಿನ್ನವಾಗಿದೆ ಎಂದು ವಿಶ್ವ ಕಪ್  ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ವಿಜಯಿಯಾಗಿಲ್ಲ. 1992ರಲ್ಲಿ ಮೊದಲ ಬಾರಿಗೆ ಸಂಧಿಸಿದಾಗಿನಿಂದಲೂ ಭಾರತ ಎಲ್ಲಾ ಐದು ಪಂದ್ಯಗಳಲ್ಲಿ ಗೆದ್ದುಕೊಂಡಿದೆ.

ವೆಬ್ದುನಿಯಾವನ್ನು ಓದಿ