ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತಕ್ಕೆ ಮತ್ತೆ ಅಗ್ರಸ್ಥಾನ

ಸೋಮವಾರ, 1 ಸೆಪ್ಟಂಬರ್ 2014 (18:39 IST)
ಇಂಗ್ಲೆಂಡ್ ವಿರುದ್ಧ ಭಾರತದ ಮೇಲುಗೈ ಸಾಧನೆ ಮತ್ತು ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ಆಘಾತಕಾರಿ ಸೋಲಿನಿಂದ ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತವನ್ನು ಮತ್ತೆ ಅಗ್ರಸ್ಥಾನಕ್ಕೆ ಏರಿಸಿದೆ. 
 
 ವಿಶ್ವ ಚಾಂಪಿಯನ್ ಭಾರತ ಈಗ ಐಸಿಸಿ ಏಕದಿನ ತಂಡದ ಶ್ರೇಯಾಂಕದಲ್ಲಿ ಒಂದನೇ ನಂಬರ್ ಸ್ಥಾನವನ್ನು ದೃಢೀಕರಿಸಿದೆ. ಜಿಂಬಾಬ್ವೆ ಆಸ್ಟ್ರೇಲಿಯಾದ ವಿರುದ್ಧ ತ್ರಿಕೋನ ಸರಣಿಯಲ್ಲಿ ಮೂರು ವಿಕೆಟ್ ಜಯಗಳಿಸಿದ್ದು ಭಾರತಕ್ಕೆ ಅನುಕೂಲವಾಗಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.ಭಾರತ ಮೂರನೇ ಏಕದಿನ ಪಂದ್ಯದಲ್ಲಿ ವಿಜಯಿಯಾದ ಬಳಿಕ 114 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಜೊತೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.

ಆದರೆ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ದ ಜಯ ದಾಖಲಿಸಿದ ಕೂಡಲೇ ಒಂದನೇ ನಂಬರ್ ಸ್ಥಾನಕ್ಕೆ ಏರಿದೆ. ಇದರ ಫಲವಾಗಿ ಆಸ್ಟ್ರೇಲಿಯಾ ಮೂರು ರೇಟಿಂಗ್ ಪಾಯಿಂಟ್ ಕಳೆದುಕೊಂಡು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ಹಿಂದೆ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.  ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಮೇಲಿನ ಜಯದಿಂದ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಶ್ರೀಲಂಕಾ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾಕ್ಕಿಂತ ಮೇಲೆ 3ನೇ ಸ್ಥಾನದಲ್ಲಿದೆ.  

ವೆಬ್ದುನಿಯಾವನ್ನು ಓದಿ