ಭಾರತ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ವಿವಾದ: ಐಸಿಸಿ ಆತಂಕ

ಗುರುವಾರ, 23 ಅಕ್ಟೋಬರ್ 2014 (18:47 IST)
ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳ ನಡುವೆ ಇರುವ ವಿವಾದದ ಬಗ್ಗೆ ಐಸಿಸಿ ಆತಂಕ ವ್ಯಕ್ತಪಡಿಸಿದ್ದು, ತಾನು ಮಧ್ಯಪ್ರವೇಶಿಸಲು ಸಾಧ್ಯವಾಗದಷ್ಟು ಅಸಹಾಯಕ ಎಂದು ಹೇಳಿದೆ. 
 
ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ತಿಂಗಳು ವಿವಾದವನ್ನು ಚರ್ಚಿಸುತ್ತೇನೆ. ಆದರೆ ವೆಸ್ಟ್ ಇಂಡೀಸ್ ಭಾರತದ ಪ್ರವಾಸ ತ್ಯಜಿಸಿರುವುದರಿಂದ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ ಎಂದು ಹೇಳಿದೆ.
 
ವೆಸ್ಟ್ ಇಂಡೀಸ್ ಭಾರತ ಸರಣಿಯನ್ನು ವೇತನ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯದಲ್ಲೇ ರದ್ದುಮಾಡಿದ್ದರಿಂದ ವೆಸ್ಟ್ ಇಂಡೀಸ್ ಕ್ರಿಕೆಟ್  ಬಿಕ್ಕಟ್ಟಿಗೆ ಸಿಲುಕಿದೆ. ವೆಸ್ಟ್ ಇಂಡೀಸ್ ವಿರುದ್ಧ ಉಳಿದೆಲ್ಲಾ ಪ್ರವಾಸಗಳನ್ನು ರದ್ದುಮಾಡುವುದಾಗಿ ಮತ್ತು ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ. ಈ ಕ್ರಮದಿಂದ ವೆಸ್ಟ್ ಇಂಡೀಸ್ ತಂಡದ ಆರ್ಥಿಕ ಸ್ಥಿತಿ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ.

ವೆಬ್ದುನಿಯಾವನ್ನು ಓದಿ