ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ : ಲಾರ್ಡ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತ

ಸೋಮವಾರ, 21 ಜುಲೈ 2014 (19:42 IST)
ಲಾರ್ಡ್ಸ್ ಮೈದಾನದಲ್ಲಿ ಧೋನಿ ಪಡೆ ಇತಿಹಾಸ ನಿರ್ಮಿಸಿದೆ. 28 ವರ್ಷಗಳ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಜಯಗಳಿಸಿದೆ. ಭಾರತ ಇಂಗ್ಲೆಂಡ್ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ  ಎರಡನೇ ಇನ್ನಿಂಗ್ಸ್‌ನಲ್ಲಿ 95 ರನ್‌ಗಳ ಭರ್ಜರಿ ಜಯಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಹೆಸರು ದಾಖಲಿಸಿದೆ. ಭಾರತ ಮೊದಲ ಇನ್ನಿಂಗ್ಸ್ 295 ರನ್ ಮತ್ತು ಇಂಗ್ಲೆಂಡ್ 319 ಮತ್ತು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 342 ರನ್ ಗಳಿಸಿತ್ತು.

ವಿದೇಶದಲ್ಲಿ ಸತತ 14 ಸೋಲುಗಳನ್ನು ಭಾರತ ಅನುಭವಿಸಿದ. ಆಂಗ್ಲರ ವಿರುದ್ಧ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಯಿಂದ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಗೆಲುವಿಗೆ 319 ರನ್ ಬೆನ್ನೆತ್ತಿದ ಇಂಗ್ಲೆಂಡ್  223 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿದೆ. ಇಶಾಂತ್ ಶರ್ಮಾ ಕಾಕ್, ಇಯಾನ್ ಬೆಲ್, ಮೊಯಿನ್ ಅಲಿ, ಮ್ಯಾಟ್ ಪ್ರಿಯರ್, ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್, ಜೊ ರೂಟ್ ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದರು.

ಇಂಗ್ಲೆಂಡ್ ಪರ ಜೊ ರೂಟ್ 66 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ ಏಳು ಬೌಂಡರಿಗಳಿದ್ದು, ಅವರು ಇಶಾಂತ್ ಬೌಲಿಂಗ್‌ನಲ್ಲಿ ಬಿನ್ನಿಗೆ ಕ್ಯಾಚಿತ್ತು ಔಟಾದರು. ಮೊಯಿನ್ ಅಲಿ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರೆಲ್ಲ ತೇವದ ಪಿಚ್‌ನಲ್ಲಿ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಭಾರತ 1986ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು.  

ವೆಬ್ದುನಿಯಾವನ್ನು ಓದಿ