ಬ್ರಿಸ್ಬೇನ್‌ನಲ್ಲಿ ಸಸ್ಯಾಹಾರವಿಲ್ಲದೇ ಕಂಗಾಲಾದ ಇಶಾಂತ್, ರೈನಾ

ಶನಿವಾರ, 20 ಡಿಸೆಂಬರ್ 2014 (18:02 IST)
ಫಿಲಿಪ್ ಹ್ಯೂಸ್ ಸಾವಿನ ದುಃಖವನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಪರಸ್ಪರ ಹಂಚಿಕೊಂಡ ಎರಡೇ ವಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಭಾರತದ ಟೀಂ ಸಂಬಂಧ ಹಳಸಿದೆ. ಶುಕ್ರವಾರ 3ನೇ ದಿನ ಭೋಜನಕ್ಕೆ ತೆರಳಿದ್ದ ಇಶಾಂತ್ ಶರ್ಮಾಅವರಿಗೆ ಮೆನುನಲ್ಲಿ ಸಸ್ಯಾಹಾರದ ಸಿದ್ಧತೆ ಇಲ್ಲದಿರುವುದನ್ನು ನೋಡಿ ಕಂಗಾಲಾದರು.

ಆಸ್ಟ್ರೇಲಿಯಾಕ್ಕೆ ಕಾಲಿಟ್ಟಾಗಿನಿಂದಲೂ ಭಾರತದ ಸಸ್ಯಾಹಾರಿ ಆಟಗಾರರಿಗೆ ಪ್ರವಾಸಿಗಳು ಒದಗಿಸುವ ಆಹಾರದಿಂದ ಅತೃಪ್ತಿಗೊಂಡಿದ್ದಾರೆ. ಅಡೆಲೈಡ್ ಮೊದಲ ಟೆಸ್ಟ್‌ನಲ್ಲಿ ಭಾರತದ ತಂಡಕ್ಕೆ ಅಡುಗೆ ತಯಾರಿಸಲು ಭಾರತದ ಅಡುಗೆಯವರನ್ನು ನೇಮಿಸಿದ್ದರು. ಆದರೆ ಬ್ರಿಸ್ಬೇನ್‌ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು.

ಮೂರನೇ ದಿನ ಭೋಜನಕ್ಕೆ ಸರಿಯಾದ ಸಸ್ಯಾಹಾರ ನೀಡಿರಲಿಲ್ಲ. ಇಶಾಂತ್ ಶರ್ಮಾ ಮತ್ತು ಸುರೇಶ್ ರೈನಾ ಈ ಬಗ್ಗೆ ದೂರು ನೀಡಿದ್ದರು.ನಂತರ ಸ್ಟೇಡಿಯಂ ಆವರಣದ ಹೊರಗೆ ರವಿ ಶಾಸ್ತ್ರಿ ಜೊತೆಗೆ ತೆರಳಿ ಸಸ್ಯಾಹಾರ ಸೇವಿಸಿದರು

ಅವರು ವಾಪಸು ಬಂದಾಗ, ಆಹಾರ ಅಥವಾ ಪಾನೀಯ ಸ್ಟೇಡಿಯಂ ಒಳಗೆ ತರಬಾರದೆಂದು ಸೂಚಿಸಲಾಯಿತು. ಡ್ರೆಸ್ಗಿಂಗ್ ರೂಂಗೆ ಹಿಂತಿರುಗುವ ಮುಂಚೆ ಹೊರಗೆ ಆಹಾರವನ್ನು ಇಬ್ಬರು ಆಟಗಾರರು ಸೇವಿಸಿದರು. 

ವೆಬ್ದುನಿಯಾವನ್ನು ಓದಿ