ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಶನಿವಾರ, 20 ಡಿಸೆಂಬರ್ 2014 (13:15 IST)
ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ 4 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿದ್ದು,  ಎರಡನೇ ಟೆಸ್ಟ್ ಪಂದ್ಯವನ್ನು ಕೂಡ  ಆಸ್ಟ್ರೇಲಿಯಾ ತನ್ನ ಬುಟ್ಟಿಗೆ ಹಾಕಿಕೊಂಡು 2-0 ಲೀಡ್ ಗಳಿಸಿದೆ. ಗೆಲುವಿಗೆ 128 ರನ್ ಅಗತ್ಯವಿದ್ದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ ಗೆಲುವಿನ ಕೇಕೆ ಹಾಕಿದೆ.

ಈ ಗೆಲುವನ್ನು ಇತ್ತೀಚೆಗೆ  ಮೈದಾನದಲ್ಲಿ ನಿಧನರಾಗಿದ್ದ ಹ್ಯೂಸ್ ಅವರಿಗೆ ಆಸ್ಟ್ರೇಲಿಯಾ ಅರ್ಪಿಸಿದೆ.  ಇಶಾಂತ್ ಶರ್ಮಾ ಆರಂಭದಲ್ಲಿ ವಾರ್ನರ್ ಮತ್ತು ವಾಟ್ಸನ್ ವಿಕೆಟ್ ಪಡೆದರು. ಉಮೇಶ್ ಯಾದವ್ ಕೊನೆಯಲ್ಲಿ ಕೆಲವು ವಿಕೆಟ್ ಕಬಳಿಸಿದರೂ, ಆಸ್ಟ್ರೇಲಿಯಾಕ್ಕೆ ಭಾರತ ನೀಡಿದ್ದ ಗುರಿಯನ್ನು ಸಮರ್ಥಿಸಿಕೊಳ್ಳುವಷ್ಟು ರನ್ ಪ್ರಮಾಣ ಇರಲಿಲ್ಲ.

ಕ್ರಿಸ್ ರೋಜರ್ಸ್ ಅಮೋಘ ಬ್ಯಾಟಿಂಗ್‌ನಿಂದ 55ಎಸೆತಕ್ಕೆ 55 ರನ್ ಗಳಿಸಿ ಗೆಲುವಿನ ದಡವನ್ನು ಮುಟ್ಟಿಸಿದರು. ಭಾರತ 1 ವಿಕೆಟ್‌ಗೆ 71 ರನ್‌ಗಳಲ್ಲಿ ದಿನದಾಟ ಆರಂಭಿಸಿ ಮಿಚೆಲ್ ಚಾನ್ಸನ್ ಬಿರುಗಾಳಿ ಬೌಲಿಂಗ್ ದಾಳಿಗೆ ಒಬ್ಬೊಬ್ಬರಾಗಿ ಪೆವಿಲಿಯನ್ ಹಾದಿ ಹಿಡಿದರು. ಭಾರತದ ಪರ ಶಿಖರ್ ಧವನ್ ಮಾತ್ರ ಟಾಪ್ ಸ್ಕೋರರ್ ಎನಿಸಿ 81 ರನ್ ಮಾಡಿದ್ದರು. ಭಾರತ 224 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ವೆಬ್ದುನಿಯಾವನ್ನು ಓದಿ