ಜಡೇಜಾ-ಆಂಡರ್‌ಸನ್ ಜಟಾಪಟಿ: ಧೋನಿ ಟೀಕೆಗೆ ಐಸಿಸಿ ಆಕ್ಷೇಪ

ಸೋಮವಾರ, 28 ಜುಲೈ 2014 (19:14 IST)
ರವೀಂದ್ರ ಜಡೇಜಾ ಅವರಿಗೆ ದಂಡ ವಿಧಿಸಿದ ಐಸಿಸಿ ಕ್ರಮದ ವಿರುದ್ಧ ಧೋನಿ ಟೀಕಿಸಿದ ಮಾರನೇ ದಿನವೇ ಐಸಿಸಿ ಧೋನಿಯ ಟೀಕೆಗೆ ಆಕ್ಷೇಪವೆತ್ತಿದೆ. ಜಡೇಜಾ ಮತ್ತು ಆಂಡರ್‌ಸನ್ ಅವರ ನಡುವೆ ಜಟಾಪಟಿಯಲ್ಲಿ ಜಡೇಜಾಗೆ ದಂಡ ವಿಧಿಸಿದ ಕ್ರಮ ನೋವಿನ ವಿಷಯ ಎಂದು ಧೋನಿ ಶುಕ್ರವಾರ ಪ್ರತಿಕ್ರಿಯಿಸಿದ್ದರು.   ಜಡೇಜಾಗೆ ದಂಡ ವಿಧಿಸಿದ್ದಕ್ಕೆ ಮಾಹಿ ಬೇಸರಿಸಿಕೊಂಡಿದ್ದಾರೆ.

ಜಡೇಜಾಗೆ ದಂಡ ವಿಧಿಸುವಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದರು..  ಈ ಕುರಿತು ಐಸಿಸಿ ಅಧ್ಯಕ್ಷ ಶ್ರೀನಿವಾಸನ್ ಸೈಲೆಂಟಾಗಿದ್ದು ಧೋನಿಗೆ ಕೋಪ ಬರಿಸಿದೆ. ತಪ್ಪು ಮಾಡಿದ ಆಟಗಾರನಿಗೆ ಬದಲು ಅಮಾಯಕ ಆಟಗಾರನಿಗೆ ದಂಡ ವಿಧಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಧೋನಿ ಹೇಳಿದ್ದರು.

ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್‌ಸನ್ ಈ ಕುರಿತು ಪ್ರತಿಕ್ರಿಯಿಸಿ, ಇಂಗ್ಲೆಂಡ್ ನಾಯಕ ಆಲಸ್ಟೈರ್ ಕುಕ್ ಮತ್ತು ಭಾರತದ ನಾಯಕ ಧೋನಿ ಈ ಘಟನೆಯ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದರಿಂದ ಐಸಿಸಿ ಶಿಸ್ತು ಪ್ರಕ್ರಿಯೆಯ ಬಲ ಕುಂದಿಸಿದೆ ಎಂದು ಹೇಳಿದ್ದಾರೆ.. ಡೇವಿಡ್ ಬೂನ್ ನೀಡಿದ ತೀರ್ಪಿಗೆ ಐಸಿಸಿ ಪೂರ್ಣ ಗೌರವ ನೀಡಿದ್ದು, ಎರಡೂ ಕಡೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಬೂನ್ ಎಚ್ಚರಿಕೆಯಿಂದ ತೀರ್ಪು ನೀಡಿದ್ದಾರೆಂದು ನಾವು ಭಾವಿಸಿದ್ದೇವೆ ಎಂದು ಹೇಳಿದರು.  
 

ವೆಬ್ದುನಿಯಾವನ್ನು ಓದಿ