ಜಡೇಜಾ-ಆಂಡರ್‌ಸನ್ ಜಟಾಪಟಿ: ಆಗಸ್ಟ್ 1ರಂದು ಐಸಿಸಿ ವಿಚಾರಣೆ

ಮಂಗಳವಾರ, 22 ಜುಲೈ 2014 (19:37 IST)
ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಮುಗಿದ ಕೂಡಲೇ ಆಗಸ್ಟ್ 1ರಂದು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡುತ್ತೇವೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.

 ಟ್ರೆಂಟ್ ಬ್ರಿಜ್ ಟೆಸ್ಟ್ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮತ್ತು ಆಂಡರ್‌ಸನ್ ನಡುವೆ ಬಿಸಿ ವಾಗ್ವಾದ ನಡೆದು ಆಟಗಾರರ ನೀತಿ ಸಂಹಿತೆಯನ್ನು ಇಬ್ಬರೂ ಉಲ್ಲಂಘಿಸಿದ್ದಾರೆಂದು ಐಸಿಸಿ ಆರೋಪಿಸಿದೆ. ಏತನ್ಮಧ್ಯೆ ಡೇವಿಡ್ ಬೂನ್ ಜಡೇಜಾ ವಿಚಾರಣೆಯನ್ನು ನಡೆಸಲಿದ್ದು, ಆಡಳಿತ ಮಂಡಳಿ ಅದರ ವಿವರಗಳನ್ನು ನೀಡಲಿದೆ.

ಟ್ರೆಂಟ್ ಬ್ರಿಜ್‌ನಲ್ಲಿ ಎರಡನೇ ದಿನದ ಆಟದ ಭೋಜನವಿರಾಮದಲ್ಲಿ ಇಬ್ಬರ ನಡುವೆ ಬಿಸಿ ಮಾತಿನ ಚಕಮಕಿ ನಡೆದು ಆಂಡರ್‌ಸನ್ ದೈಹಿಕವಾಗಿ ಜಡೇಜಾರನ್ನು ದೂಡಿದರು ಎಂಬ ಆರೋಪವನ್ನು ಪ್ರವಾಸಿ ತಂಡ ಹೊರಿಸಿದೆ. ಆಂಡರ್‌ಸನ್ ಜಡೇಜಾರನ್ನು ದೂಡಿ ನಿಂದಿಸಿದರು ಎಂದು ಟೀಂ ಇಂಡಿಯಾ ದೂರಿದ್ದರೆ, ಇಂಗ್ಲೆಂಡ್ ಕೂಡ ಪ್ರತಿದೂರು ಸಲ್ಲಿಸಿದೆ. 

ವೆಬ್ದುನಿಯಾವನ್ನು ಓದಿ