ಬಂಗಾಳ ವಿರುದ್ಧ ಚೇತರಿಸಿಕೊಂಡ ಕರ್ನಾಟಕ 237ಕ್ಕೆ 7 ವಿಕೆಟ್

ಸೋಮವಾರ, 15 ಡಿಸೆಂಬರ್ 2014 (09:12 IST)
ಪಶ್ಚಿಮಬಂಗಾಳದ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ 69ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡ ಚೇತರಿಸಿಕೊಂಡು ದಿನದಂತ್ಯಕ್ಕೆ 237 ರನ್ನಿಗೆ 7 ವಿಕೆಟ್ ಕಳೆದುಕೊಂಡಿದೆ.  ಸೂರ್ಯನ ಕಣ್ಣಾಮುಚ್ಚಾಲೆಯಾಟದಿಂದ 66 ಓವರುಗಳ ಬೌಲಿಂಗ್ ಮಾತ್ರ ಸಾಧ್ಯವಾಯಿತು.

ಕರ್ನಾಟಕ ಬ್ಯಾಟಿಂಗ್ ಆಡಲಿಳಿದ ಕೂಡಲೇ ಅಶೋಕ್ ದಿಂಡಾ ಕರ್ನಾಟಕದ ಅಗ್ರ ಮೂವರು ಆಟಗಾರರನ್ನು ಔಟ್ ಮಾಡಿದ್ದರಿಂದ ಅವರ ಬೌಲಿಂಗ್ ಅಂಕಿಅಂಶ 7-3-19-3ಕ್ಕೆ ತಲುಪಿದೆ.ನಂತರ ಇನ್ನೊಂದು ವಿಕೆಟ್ ಪಡೆದು 50 ರನ್‌‍ಗೆ 4 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಸ್ಟುವರ್ಟ್ ಬಿನ್ನಿ ಬಂಗಾಳದ ಬೌಲರುಗಳನ್ನು ದಂಡಿಸುತ್ತಾರೆಂಬ ನಿರೀಕ್ಷೆ ಹುಸಿಯಾಗಿ ಸುಲಭ ಕ್ಯಾಚಿತ್ತು 37ರನ್‌ಗೆ ಔಟಾದರು.

ಬಂಗಾಳದ ವೀರ್ ಪ್ರತಾಪ್ ಸಿಂಗ್ 45 ರನ್‌ಗೆ 3 ವಿಕೆಟ್ ಗಳಿಸಿ ಮನೋಜ್ಞ ಬೌಲಿಂಗ್ ದಾಳಿ ಮಾಡಿ ಪಾಂಡೆ ಮತ್ತು ಕರುಣ್ ನಾಯರ್ ವಿಕೆಟ್ ಪಡೆದರು.ಎರಡನೇ ಸೆಷನ್‌ನಲ್ಲಿ ಗೌತಮ್ ಮತ್ತು ವಿನಯ್ ಕುಮಾರ್ ಕೆಲವು ಬೌಂಡರಿಗಳ ಮೂಲಕ ಪುನಃ ಇನ್ನಿಂಗ್ಸ್ ನಿರ್ಮಿಸಿದರು.

ಗೌತಮ್ 63 ರನ್ ಗಳಿಸಿದ್ದಾಗ ವೀರ್ ಪ್ರತಾಪ್ ಅವರ ಶಾರ್ಟ್ ಬಾಲ್‌ಗೆ ಔಟಾದರೂ ಕರ್ನಾಟಕವನ್ನು ಸುರಕ್ಷತೆಯ ದಡವನ್ನು ಮುಟ್ಟಿಸಿದ್ದರು. ನಂತರ ಆಡಲಿಳಿದ ಶ್ರೈಯಾಸ್ ಗೋಪಾಲ್ ವಿನಯ್ ಕುಮಾರ್ ಜೊತೆ 8ನೇ ವಿಕೆಟ್‌‍ಗೆ 59 ರನ್ ಜೊತೆಯಾಟವಾಡಿದರು.

ವೆಬ್ದುನಿಯಾವನ್ನು ಓದಿ