ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ ಕೊಹ್ಲಿ

ಮಂಗಳವಾರ, 18 ನವೆಂಬರ್ 2014 (20:05 IST)
ಭಾರತದ ಬಿರುಸಿನ ಆಟಗಾರ ವಿರಾಟ್ ಕೊಹ್ಲಿ ರಿಲಯನ್ಸ್ ಐಸಿಸಿ ಏಕದಿನ ಆಟಗಾರ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಲಂಕಾ ವಿರುದ್ಧ ಭಾರತ 5-0 ಸರಣಿ ಜಯದ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 15 ನೇ ಸ್ಥಾನಕ್ಕೆ ಏರಿದ್ದು, ಐಸಿಸಿ ವಿಶ್ವಕಪ್‌ಗೆ ಸಿದ್ಧತೆ ನಡೆಸಿದ್ದಾರೆ.

ಕೊಹ್ಲಿ ಕೊನೆಯ ಏಕದಿನ ಪಂದ್ಯದಲ್ಲಿ ಸರಣಿಯ ಅತ್ಯಧಿಕ ಸ್ಕೋರು 139 ರನ್ ಹೊಡೆದಿದ್ದು, ಉಳಿದ ಪಂದ್ಯಗಳಲ್ಲಿ 55, 53 ಮತ್ತು 49 ರನ್ ಹೊಡೆದಿದ್ದರು. ಶರ್ಮಾ ಕೊಲ್ಕತ್ತಾದಲ್ಲಿ ವಿಶ್ವ ದಾಖಲೆ ಮುರಿದ 264 ರನ್ ಬಾರಿಸಿದ ಬಳಿಕ ಪಾಯಿಂಟ್ ಪಟ್ಟಿಯಲ್ಲಿ 18 ಸ್ಥಾನಗಳನ್ನು ಜಿಗಿದಿದ್ದಾರೆ.
 
ಶ್ರೀಲಂಕಾ ಪರ ಲಾಹಿರು ತಿರಮನ್ನೆ ನಾಲ್ಕು ಸ್ಥಾನಗಳಷ್ಟು ಮೇಲೇರಿದ್ದಾರೆ. ಕೊಲ್ಕತ್ತಾ ಮತ್ತು ರಾಂಚಿಯಲ್ಲಿ ಅರ್ಧಶತಕಗಳನ್ನು ಅವರು ಬಾರಿಸಿದ್ದಾರೆ. ರಿಲಯನ್ಸ್ ಏಕದಿನ ಆಲ್‌ರೌಂಡರ್ ಪಟ್ಟಿಯಲ್ಲಿ ಶ್ರೀಲಂಕಾ ನಾಯಕ ಏಂಜಲೋ ಮ್ಯಾಥೀವ್ಸ್ 339 ರನ್ ಕಲೆಹಾಕುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

ಸರಣಿಯಲ್ಲಿ ಸರಾಸರಿ 113 ರನ್ ಸ್ಕೋರ್ ಮಾಡುವ ಮೂಲಕ ನಾಲ್ಕು ಸ್ಥಾನ ಮೇಲೇರಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನ ಮೇಲೇರಿದ್ದಾರೆ. 

ವೆಬ್ದುನಿಯಾವನ್ನು ಓದಿ