ವರುಣನ ಅರ್ಭಟದಿಂದ ಭಾರತ- ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ರದ್ದು

ಸೋಮವಾರ, 26 ಜನವರಿ 2015 (15:47 IST)
ವರುಣನ ಅರ್ಭಟದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಕ್ರಿಕೋನ ಸರಣಿ ಪಂದ್ಯ ರದ್ದಾಗಿದೆ. ಭಾರತ 16 ಓವರ್‌ಗಳಲ್ಲಿ 69 ರನ್‌ಗಳನ್ನು ಪೇರಿಸಿರುವಂತೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.  
 
ಭಾರತ ಬ್ಯಾಟಿಂಗ್ ಆರಂಭಿಸಿ 16 ಓವರ್‌ಗಳಲ್ಲಿ 69 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿರುವಂತೆ ಮಳೆ ಸುರಿಯಲು ಆರಂಭಿಸಿತು. ಸುಮಾರು ಮೂರು ಗಂಟೆಗಳ ಕಾಲ ಮಳೆ ನಿಲ್ಲುವಿಕೆಗಾಗಿ ಕಾಯ್ದರು ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಅಂಪೈರ್ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. 
 
ಪಂದ್ಯ ರದ್ದುಗೊಂಡಿದ್ದರಿಂದ ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್‌ಗಳನ್ನು ನೀಡಲಾಯಿತು. ಜನೆವರಿ 30 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
 
ಇಂದು ಬೆಳಿಗೆ ಮಂಜು ಕವಿದಿದ್ದರಿಂದ ಪಂದ್ಯ 40 ನಿಮಿಷ ತಡವಾಗಿ ಆರಂಭವಾಯಿತು. ಭಾರತ ತಂಡ ಮೊದಲಿಗೆ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಏಳನೇ ಓವರ್‌ನಲ್ಲಿ ಅಂಬಟಿ ರಾಯಡು 23 ರನ್‌ಗಳಿಸಿದ್ದಾಗ ಓಟಾಗಿ ಪೆವಿಲಿಯನ್‌ಗೆ ಮರಳಿದರು.
 
 

ವೆಬ್ದುನಿಯಾವನ್ನು ಓದಿ