2ನೇ ಟೆಸ್ಟ್‌ನಲ್ಲಿ ಮುರಳಿ ವಿಜಯ್ ಅಮೋಘ ಶತಕ: ಭಾರತಕ್ಕೆ ಭದ್ರ ಅಡಿಪಾಯ

ಬುಧವಾರ, 17 ಡಿಸೆಂಬರ್ 2014 (12:19 IST)
ಮುರಳಿ ವಿಜಯ್ ಅವರ ಅಮೋಘ 144 ರನ್ ಶತಕದ ನೆರವಿನೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 261 ರನ್ ದಾಖಲಿಸುವ ಮೂಲಕ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಅಡಿಪಾಯ ಹಾಕಿದೆ. ರಹಾನೆ 46 ರನ್‌ಗಳೊಂದಿಗೆ ಅಜೇಯರಾಗಿ ಆಡುತ್ತಿದ್ದಾರೆ.

 
ಮುರಳಿ ವಿಜಯ್ ಅಡೆಲೈಡ್‌ನಲ್ಲಿದ್ದ ಫಾರಂ ಅನ್ನು ಬ್ರಿಸ್ಬೇನ್‌ಗೂ ಮುಂದುವರಿಸಿದ್ದು 5ನೇ ಶತಕ ದಾಖಲಿಸಿ ಭಾರತಕ್ಕೆ ಭದ್ರ ಅಡಿಪಾಯ ಹಾಕಿದರು. ಅವರ ಸ್ಕೋರಿನಲ್ಲಿ 22 ಬೌಂಡರಿಗಳಿದ್ದವು. 1977ರಲ್ಲಿ ಬ್ರಿಸ್ಬೇನ್‌ನಲ್ಲಿ ಸುನಿಲ್ ಗವಾಸ್ಕರ್ ಶತಕ ದಾಖಲಿಸಿದ್ದು, ಅವರ ನಂತರ ವಿಜಯ್ ಶತಕ ದಾಖಲಿಸಿದ ಪ್ರಥಮ ಭಾರತೀಯ ಓಪನರ್ ಆಗಿದ್ದಾರೆ.

ಹ್ಯಾಜೆಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಉತ್ತಮ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಬೌಲಿಂಗ್ ಮಾಡಿದರು. ವಿಜಯ್ ಅವರಿಗೆ ಶಾನ್ ಮಾರ್ಶ್ ಬೌಲಿಂಗ್‌ನಲ್ಲಿ 36 ರನ್‌ಗಳಿದ್ದಾಗ ಜೀವದಾನ ಸಿಕ್ಕಿತು. ಕಳೆದ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ಹಾಜಲ್‌ವುಡ್ ಬೌಲಿಂಗ್‌ನಲ್ಲಿ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾದರು. ಅವರ 19 ರನ್ ಮಾತ್ರ ಸ್ಕೋರ್ ಮಾಡಿದ್ದಾರೆ.  ಪೂಜಾರ್ ಕೂಡ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಹ್ಯಾಡಿನ್‌ಗೆ ಕ್ಯಾಚಿತ್ತು 18 ರನ್‌‍ಗೆ ಔಟಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ