ಕ್ರಿಕೆಟ್: ಶತಕ ದಾಖಲಿಸಿದ ರೈನಾ, ಇಂಗ್ಲೆಂಡ್‌ಗೆ 305 ರನ್‌ಗಳ ಸವಾಲ್

ಬುಧವಾರ, 27 ಆಗಸ್ಟ್ 2014 (20:06 IST)
ಇಂಗ್ಲೆಂಡ್‌ನ ಕಾರ್ಡಿಫ್‌ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 304 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.
 
ಸುರೇಶ್ ರೈನಾ ಸಿಡಿಸಿದ ಶತಕ ಭಾರತ 300ರ ಗಡಿ ದಾಟಲು ನೆರವಾಗಿದ್ದು, ಆಂಗ್ಲರು ಗೆಲ್ಲಲು 305 ರನ್‌ಗಳ ಬೃಹತ್ ಸವಾಲು ನೀಡಿದೆ.
 
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆಟಗಾರರು ಆರಂಭಿಕ ಆಘಾತ ಅನುಭವಿಸಿದರು. ಮೊದಲ ಹತ್ತು ಓವರ್‌ಗಳಲ್ಲೇ ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕರಾಗಿ ಕಣಕ್ಕೀಳಿದ ಶಿಖರ್ ಧವನ್ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಎಡವಿದರು. ಕೇವಲ 11 ರನ್‌ಗಳಿಸಿ ಕ್ರಿಸ್ ವೋಕ್ಸ್ ಬೌಲಿಂಗ್‌ಗೆ ಜೋಸ್ ಬಟ್ಲೆರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ದಾರಿ ಹಿಡಿದರು.
 
ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾರ(52) ಹಾಗೂ ಮಧ್ಯಮ ಕ್ರಮಾಂಕ ಆಟಗಾರ ಅಂಜಿಕೆ ರಹಾನೆ(41) ಉತ್ತಮ ರನ್ ಗಳಿಸಿದ್ದರಿಂದ ಭಾರತ ಕೊಂಚ ಚೇತರಿಸಿಕೊಂಡಿತು. ನಂತರ ಬಂದ ಸುರೇಶ್ ರೈನಾ(100) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ(52) ಜೊತೆಯಾಟ ಭಾರತ ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
 
ಸ್ಕೋರ್ ವಿವರ
 
ಭಾರತ 304
 
ರೋಹಿತ್ ಶರ್ಮಾ ಬಿ ಟ್ರೇಡ್‌ವೇಲ್ ಸಿ ವೋಕ್ಸ್ 52, ಶಿಖರ್ ಧವನ್ ಬಿ ವೋಕ್ಸ್ ಸಿ ಬಟ್ಲರ್ 11, ವಿರಾಟ್ ಕೊಹ್ಲಿ ಬಿ ವೋಕ್ಸ್ ಸಿ ಕೂಕ್ 0, ಅಜಿಂಕ್ಯಾ ರಹಾನೆ ಬಿ ಟ್ರೇಡ್‌ವೇಲ್ ಸ್ಟೆಂಪ್ ಬಟ್ಲರ್ 41, ಸುರೇಶ್ ರೈನಾ ಬಿ ವೋಕ್ಸ್ ಸಿ ಅಂಡರ್ಸನ್ 100, ಎಂ.ಎಸ್ ಧೋನಿ ಬಿ ವೋಕ್ಸ್ 52, ರವೀಂದ್ರ ಜಡೇಜಾ ಅಜೇಯ 9, ಆರ್. ಅಶ್ವಿನ್ ಅಜೇಯ 10.
ಇತರೆ: (ಬೈ 1, ಲೆಗ್‌ಬೈ 11, ವೈಡ್ 16, ನೋಬಾಲ್ 1) 29
 
ಬೌಲಿಂಗ್: ಕ್ರಿಸ್ ವೋಕ್ಸ್ 52ಕ್ಕೇ 4, ಜೇಮ್ಸ್ ಟ್ರೆಡ್‌ವೇಲ್ 42ಕ್ಕೇ 2

ವೆಬ್ದುನಿಯಾವನ್ನು ಓದಿ