ಭಾರತವನ್ನು ಟೆಸ್ಟ್ ಶ್ರೇಯಾಂಕದಲ್ಲಿ ಹಿಂದೂಡಿದ ಪಾಕಿಸ್ತಾನ

ಸೋಮವಾರ, 27 ಅಕ್ಟೋಬರ್ 2014 (18:55 IST)
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೆ ಭಾರತ ಕುಸಿದಿದ್ದು, ಮಿಷಬ್ ಉಲ್ ಹಕ್ ನಾಯಕತ್ವದ ಪಾಕಿಸ್ತಾನದ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಾವಳಿಯಲ್ಲಿ 1-0 ಮುನ್ನಡೆ ಸಾಧಿಸಿರುವುದರಿಂದ 5 ನೇ ಸ್ಥಾನ ಪಾಕಿಸ್ತಾನದ ಬುಟ್ಟಿಗೆ ಬಿದ್ದಿದೆ. 
 
ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ಕೂಡ ಟೆಸ್ಟ್ ಶ್ರೇಯಾಂಕದಲ್ಲಿ ನಂ. 1 ಸ್ಥಾನ ತಪ್ಪಿಹೋಗಲಿದೆ.  ದಕ್ಷಿಣ ಆಫ್ರಿಕಾಗಿಂತ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಲು ಆಸ್ಟ್ರೇಲಿಯಾ ಎರಡೂ ಟೆಸ್ಟ್‌ಗಳನ್ನು ಗೆಲ್ಲಬೇಕಿತ್ತು. ಆದರೆ ಈಗ ಎರಡನೇ ಟೆಸ್ಟ್ ಗೆದ್ದರೂ ಕೂಡ ದಕ್ಷಿಣ ಆಫ್ರಿಕಾವನ್ನು ಮುಂದಿಕ್ಕಿ ಅದು ಎರಡನೇ ಸ್ಥಾನದಲ್ಲಿ ಉಳಿಯಲಿದೆ.ಇದಕ್ಕೆ ತದ್ವಿರುದ್ಧವಾಗಿ ಪಾಕಿಸ್ತಾನ ಎರಡನೇ ಟೆಸ್ಟ್ ಗೆದ್ದರೆ,ಅದು ಇಂಗ್ಲೆಂಡ್, ಶ್ರೀಲಂಕಾ ಮತ್ತು ಭಾರತವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿಯಲಿದೆ.  

1-1 ಡ್ರಾದಿಂದ 99 ರೇಟಿಂಗ್ ಪಾಯಿಂಟ್‌ಗಳಲ್ಲಿ 5 ನೇ ಸ್ಥಾನಕ್ಕೆ ಮುನ್ನಡೆಯಲಿದ್ದು, ಭಾರತಕ್ಕಿಂತ ಮೂರು ಮುನ್ನಡೆ ಮತ್ತು ನಾಲ್ಕನೇ ಶ್ರೇಯಾಂಕದ ಶ್ರೀಲಂಕಾಗಿಂತ ಎರಡು ಶ್ರೇಯಾಂಕ ಹಿಂದುಳಿಯಲಿದೆ. ಅಬು ದಾಬಿಯಲ್ಲಿ ಟೆಸ್ಟ್ ಡ್ರಾ ಆದರೆ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದೆ.

ವೆಬ್ದುನಿಯಾವನ್ನು ಓದಿ