ಪಾಕ್ ಆಫ್‌ಸ್ಪಿನ್ ಬೌಲರ್ ಸಯೀದ್ ಅಜ್ಮಲ್ ಅಮಾನತು: ಐಸಿಸಿ ಆದೇಶ

ಮಂಗಳವಾರ, 9 ಸೆಪ್ಟಂಬರ್ 2014 (13:26 IST)
ಪಾಕಿಸ್ತಾನದ ಆಫ್‌ಸ್ಪಿನ್ ಬೌಲರ್ ಸಯೀದ್ ಅಜ್ಮಲ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿ ಐಸಿಸಿ ಆದೇಶ ನೀಡಿರುವುದರಿಂದ ವಿಶ್ವಕಪ್ ಇನ್ನು 5 ತಿಂಗಳು ಬಾಕಿವುಳಿದಿರುವಂತೆ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಅವರ ಬೌಲಿಂಗ್ ಶೈಲಿ ನಿಯಮಬಾಹಿರವಾಗಿರುವುದರಿಂದ ಬ್ರಿಸ್ಬೇನ್‌ನಲ್ಲಿ ಕಳೆದ ತಿಂಗಳು ಪರಿಶೀಲನೆ ನಡೆಸಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

 ಏಕದಿನ ಪಂದ್ಯಗಳಲ್ಲಿ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದ 36 ವರ್ಷ ವಯಸ್ಸಿನ ಅಜ್ಮಲ್ ಅವರನ್ನು ಕಳೆದ ತಿಂಗಳು ನಡೆದ ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್‌ನಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿಯನ್ನು ಮಾಡಿದ್ದಾರೆಂದು ದೂರಲಾಗಿತ್ತು.

ಅಜ್ಮಲ್ ತಮ್ಮ ಬೌಲಿಂಗ್ ಶೈಲಿಯನ್ನು ಬದಲಿಸಿಕೊಂಡರೆ ಅವರ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು ಎಂದು ಐಸಿಸಿ ತಿಳಿಸಿದೆ. 
 

ವೆಬ್ದುನಿಯಾವನ್ನು ಓದಿ