ಭಾರತದ ಜೊತೆ 6 ದ್ವಿಸರಣಿಗಳು: ಬಿಸಿಸಿಐ ಜೊತೆ ಒಪ್ಪಂದಕ್ಕೆ ಪಾಕ್ ಸಹಿ

ಶುಕ್ರವಾರ, 27 ಜೂನ್ 2014 (18:15 IST)
ಭಾರತ ಮತ್ತು ಪಾಕಿಸ್ತಾನದ ಉಭಯ ರಾಷ್ಟ್ರಗಳು ಮುಂದಿನ 8 ವರ್ಷಗಳಲ್ಲಿ 6 ದ್ವಿಕೋನ ಸರಣಿಗಳನ್ನು ಆಡುವ ಬಗ್ಗೆ ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ  ಪಾಕ್  ವಿಶೇಷ ಅನುಕೂಲ  ಗಳಿಸಿದ್ದು, ಅವುಗಳ ಪೈಕಿ ಭಾರತದ ಜತೆ ಒಪ್ಪಂದವೂ ಸೇರಿದೆ.

ಪಾಕಿಸ್ತಾನಕ್ಕೆ ಪಿಸಿಬಿ ಅಧ್ಯಕ್ಷ ನಜ್ಮಾ ಸೇಥಿ ಪಡೆದ ಅನುಕೂಲಗಳು 4 ಸರಣಿಗಳನ್ನು ಪಿಸಿಬಿ ಯುಎಇ ಅಥವಾ ಪಾಕಿಸ್ತಾನದಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಆಯೋಜಿಸಲಾಗಿರುವುದು, 6 ಪ್ರವಾಸಗಳು ಫ್ಯೂಚರ್ ಟೂರ್ಸ್ ಪ್ರೋಗ್ರಾಂ ಭಾಗವಾಗಿದ್ದು, 2015ರಿಂದ 2023ರ ನಡುವೆ ಆಡಲಾಗುತ್ತದೆ.ಇನ್ನೊಂದು ಮುಖ್ಯ ಸಾಧನೆ ಪಾಕಿಸ್ತಾನಕ್ಕೆ ನಾಲ್ಕನೇ ಶ್ರೇಯಾಂಕ ನೀಡಲು ಐಸಿಸಿ ಒಪ್ಪಿಗೆ ನೀಡಿರುವುದಾಗಿದೆ.

 ಪ್ರಸಾರ ಮತ್ತಿತರ ಹಕ್ಕುಗಳಿಂದ ಐಸಿಸಿಗೆ ಸಿಗುವ ಶೇಕಡಾವಾರು ಆದಾಯ ಅನ್ವಯಿಸಿ ಬಿಗ್ ತ್ರೀ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ ನಾಲ್ಕನೇ ಶ್ರೇಯಾಂಕವನ್ನು ಪಾಕ್‌ಗೆ ನೀಡಲು ಐಸಿಸಿ ಒಪ್ಪಿದೆ. 

ವೆಬ್ದುನಿಯಾವನ್ನು ಓದಿ