ರವೀಂದ್ರ ಜಡೇಜಾಗೆ ದಂಡ: ಬಿಸಿಸಿಐ-ಐಸಿಸಿ ನಡುವೆ ತಿಕ್ಕಾಟ

ಶುಕ್ರವಾರ, 25 ಜುಲೈ 2014 (17:07 IST)
ಜಡೇಜಾ-ಆಂಡರ್‌ಸನ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಐಸಿಸಿ ಮತ್ತು ಬಿಸಿಸಿಐ ನಡುವೆ ತಿಕ್ಕಾಟ ಶುರುವಾಗಿದೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡವನ್ನು ಐಸಿಸಿ ವಿಧಿಸಿದೆ.

ಆದರೆ ಜಡೇಜಾ ಬೆಂಬಲಿಸಿ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದ್ದು, ಐಸಿಸಿ ಜಡೇಜಾಗೆ ದಂಡ ವಿಧಿಸಿದ್ದು ತಪ್ಪು. ಜಡೇಜಾ ಯಾವುದೇ ತಪ್ಪು ಮಾಡಿಲ್ಲ ಎಂದು ಬಿಸಿಸಿಐ ಐಸಿಸಿ ತೀರ್ಪನ್ನೇ ತಿರಸ್ಕರಿಸಿದೆ. ರವೀಂದ್ರ ಜಡೇಜಾ ಮತ್ತು ಆಂಡರ್‌ಸನ್ ನಡುವೆ ಜಟಾಪಟಿಯಲ್ಲಿ ಆಂಡರ್‌ಸನ್ ತಮ್ಮನ್ನು ದೈಹಿಕವಾಗಿ ದೂಡಿ ನಿಂದಿಸಿದ್ದರು ಎಂದು ಜಡೇಜಾ ದೂರಿದ ಬಳಿ ಐಸಿಸಿ ಇದನ್ನು ವಿಚಾರಣೆಗೆ ಎತ್ತಿಕೊಂಡಿತ್ತು.

ಆಂಡರ್‌ಸನ್ ವಿರುದ್ಧದ ತಪ್ಪು ಸಾಬೀತಾದರೆ ಅವರಿಗೂ ಉಳಿದ ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಪಂದ್ಯಗಳಲ್ಲಿ ಆಡದಂತೆ ನಿಷೇಧಿಸುವ ಸಾಧ್ಯತೆಯಿದೆ. ಆಂಡರಸನ್‌ ವಿರುದ್ಧ ವಿಚಾರಣೆ ಇನ್ನೂ ನಡೆಯುತ್ತಿದೆ. 

ವೆಬ್ದುನಿಯಾವನ್ನು ಓದಿ