ಟೀಂ ಇಂಡಿಯಾಗೆ ರವಿಶಾಸ್ತ್ರಿ ನಿರ್ದೇಶಕರಾಗಿ ನೇಮಕ

ಮಂಗಳವಾರ, 19 ಆಗಸ್ಟ್ 2014 (12:49 IST)
ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾಗೆ ಹೊಸ ನಿರ್ದೇಶಕರನ್ನು ನೇಮಿಸಲಾಗಿದೆ.  ಇಂಗ್ಲೆಂಡ್ ವಿರುದ್ಧ 5 ಏಕದಿನ ಪಂದ್ಯಗಳಿಗೆ ತಂಡದ ನಿರ್ದೇಶಕರಾಗಿ ರವಿಶಾಸ್ತ್ರಿ ನೇಮಕವಾಗಿದ್ದಾರೆ. ಬಿಸಿಸಿಐ ಬೌಲಿಂಗ್ ಮತ್ತು ಬ್ಯಾಟಿಂಗ್ ಕೋಚ್‌ಗಳಿಬ್ಬರಿಗೂ ವಿಶ್ರಾಂತಿ ನೀಡಿ, ರಜೆ ಮೇಲೆ ತೆರಳಲು ಸೂಚಿಸಿದೆ.

 ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್  ಇಬ್ಬರನ್ನೂ ವಜಾ ಮಾಡುವ ಸಾಧ್ಯತೆಯಿದೆ. ಟೀಂ ಇಂಡಿಯಾ ಕೋಚ್ ಡೆಂಕನ್ ಫ್ಲೆಚರ್  ಅವರನ್ನು ಕಡೆಗಣಿಸಲಾಗಿದೆ. ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಅವರನ್ನು ನೇಮಕ ಮಾಡಿದೆ. ಬಿಸಿಸಿಐ ಜಂಟಿ ಕಾರ್ಯದರ್ಶಿ ಅನುರಾಗ್ ಠಾಕೂರ್  ಈ ವಿಷಯವನ್ನು ತಿಳಿಸಿದೆ. 

ತಂಡದ ಸಹಾಯಕ ಕೋಚ್‌ಗಳನ್ನಾಗಿ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಶ್ರೀಧರ್ ಅವರನ್ನು ನೇಮಿಸಲಾಗಿದೆ. ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಅನುಭವಿಸುತ್ತಿರುವ ಸತತ ಸೋಲಿನಿಂದಾಗಿ ವ್ಯಾಪಕ ಟೀಕಾಪ್ರವಾಹ ಹರಿದುಬರುತ್ತಿದ್ದು, ಧೋನಿಯನ್ನು ನಾಯಕತ್ವದಿಂದ ತೆಗೆಯಬೇಕೆಂಬ ಕೂಗು ಕೇಳಿಬರುತ್ತಿದೆ.

ಆದರೆ ಧೋನಿಗೆ ಪರ್ಯಾಯವಾಗಿ ಟೆಸ್ಟ್ ತಂಡಕ್ಕೆ ಯಾರನ್ನು ನಾಯಕರನ್ನಾಗಿಸಬೇಕೆಂಬುದು ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಅವರನ್ನು ನಾಯಕನ ಸ್ಥಾನಕ್ಕೆ ಆಯ್ಕೆಮಾಡಲು ಸಾಧ್ಯವಾಗುವುದಿಲ್ಲ. 
 

ವೆಬ್ದುನಿಯಾವನ್ನು ಓದಿ