ಭಾರತ ಸಮತೋಲಿತ ತಂಡವಾಗಿದ್ದು ಸೋಲಿಸುವುದು ಕಷ್ಟ: ಸಚಿನ್

ಗುರುವಾರ, 4 ಸೆಪ್ಟಂಬರ್ 2014 (19:49 IST)
ನಿವೃತ್ತ ಬ್ಯಾಟಿಂಗ್ ಪ್ರತಿಭೆ ಸಚಿನ್ ತೆಂಡೂಲ್ಕರ್ ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.   ತಂಡದ ಆಲ್ ರೌಂಡ್ ಸಾಮರ್ಥ್ಯದ ಕಾರಣದಿಂದ ಅದು ವಿಜಯಿಯಾಗುತ್ತದೆಂದು ಆಶಾಭಾವನೆ ವ್ಯಕ್ತಪಡಿಸಿದರು.

 ಪ್ರಶಸ್ತಿಗಾಗಿ ಭಾರತ ಪ್ರಬಲ ಸ್ಪರ್ಧಿಗಳಲ್ಲಿ ಒಂದಾಗಿದೆ.  ಭಾರತ ತಂಡ ಸಮತೋಲಿತ ತಂಡವಾಗಿದ್ದು ಸೋಲಿಸುವುದು ಕಷ್ಟ ಎಂದು ತೆಂಡೂಲ್ಕರ್ ಪ್ರತಿಕ್ರಿಯಿಸಿದರು.

ಇಂಗ್ಲೆಂಡ್ ವಿರುದ್ಧ 3-0ಯಿಂದ ಜಯಗಳಿಸಿದ ಭಾರತದ ತಂಡದ ಆಟಗಾರರ ಬಗ್ಗೆ ಶ್ಲಾಘಿಸಿದರು.  ಬ್ಯಾಟಿಂಗ್ ನೋಡುವುದಾದರೆ ಬಲ ಮತ್ತು ಎಡಗೈ ಆಟಗಾರರ ಮಿಶ್ರಣವಿದೆ.  ಕ್ರೀಸ್‌ನಲ್ಲಿ ಬಲ ಮತ್ತು ಎಡ ಸಂಯೋಜನೆಯಿದ್ದಾಗ ಬೌಲರ್‌ಗಳಿಗೆ ಕಠಿಣವಾಗುತ್ತದೆ.

 ಅವರು ಸರಿಯಾದ ಲೈನ್ ಕಂಡುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.  ಭಾರತ ಆಳವಾದ ಬ್ಯಾಟಿಂಗ್ ಬಲ ಹೊಂದಿದ್ದರೂ ಅನನುಭವಿ ಬೌಲಿಂಗ್ ಕೊನೆಯ ಓವರುಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ.

ಆದರೆ ಬೌಲಿಂಗ್ ದಾಳಿ ಕೂಡ ಚೆನ್ನಾಗಿ ಸಂಯೋಜನೆಯಾಗಿದೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.  2015ರ ವಿಶ್ವ ಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಫೆ. 14-ಮಾರ್ಚ್ 29ರವರೆಗೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ