ದಿಯೋಧರ್ ಟ್ರೋಫಿಯಿಂದ ಹೊರಗುಳಿದ ಗಂಭೀರ್, ಸೆಹ್ವಾಗ್

ಬುಧವಾರ, 19 ನವೆಂಬರ್ 2014 (19:25 IST)
ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್  ಭಾರತ ತಂಡಕ್ಕೆ ಪುನಃ ಹಿಂತಿರುಗುವ ಸಾಧ್ಯತೆ ಮಸುಕಾಗಿದೆ. ಏಕೆಂದರೆ ಈ ಜೋಡಿ ದಿಯೋಧರ್
 ಟ್ರೋಫಿಗಾಗಿ 15 ಆಟಗಾರರ ಉತ್ತರ ವಲಯ ತಂಡದ ಆಯ್ಕೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ.

ತಂಡಕ್ಕೆ  ಹರ್ಬಜನ್ ಸಿಂಗ್ ನಾಯಕತ್ವ ವಹಿಸಲಿದ್ದು, ಉತ್ತಮ ಸಾಧನೆ ತೋರಿದವರಿಗೆ ಸೂಕ್ತವಾಗಿ ಬಹುಮಾನಿಸಲು ರಾಷ್ಟ್ರೀಯ ಆಯ್ಕೆದಾರ ವಿಕ್ರಮ್ ರಾಥೌರ್ ನಿರ್ಧರಿಸಿದ್ದಾರೆ.  ಆದರೆ ದೆಹಲಿಯ ಭರವಸೆಯ ಕಿರಿಯ ಆಟಗಾರರ ಹಾದಿಗೆ ಅಡ್ಡಬರಲು ತಾವು ಬಯಸುವುದಿಲ್ಲ ಎಂದು ಸೆಹ್ವಾಗ್ ಕೆಲವು ಡಿಡಿಸಿಎ ಅಧಿಕಾರಿಗಳಿಗೆ ಹೇಳಿದ್ದಾರೆ.

ಆದರೆ ಗಂಭೀರ ಆಡದೇ ಉಳಿದಿರುವುದಕ್ಕೆ ಸ್ಪಷ್ಟ ಉತ್ತರವಿನ್ನೂ ಸಿಕ್ಕಿಲ್ಲ. ವಿಶ್ವ ಕಪ್ ತಂಡಕ್ಕೆ ಆಯ್ಕೆಯಾಗಲು ತಮಗೆ ಅವಕಾಶ ಕ್ಷೀಣಿಸಿದೆ ಎನ್ನುವುದು ಇಬ್ಬರಿಗೂ ಅರಿವಿದೆ. ಏಕೆಂದರೆ ಭಾರತದ ಓಪನರ್‌ಗಳು ಉತ್ತಮ ಫಾರಂನಲ್ಲಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಹ್ವಾಗ್ ಮತ್ತು ಗಂಬೀರ್ ಕ್ರಮವಾಗಿ 122 ಮತ್ತು 178 ರನ್ ಹೊಡೆದಿರುವುದು ಕೂಡ ಅವರ ಭವಿಷ್ಯ ಮಂಕಾಗಿಸಿದೆ.  ಉತ್ತರವಲಯ ತಂಡದಲ್ಲಿ ಅನುಭವಿ ಆಟಗಾರರಾದ ಹರ್ಭಜನ್, ಯುವರಾಜ್ ಸಿಂಗ್, ಮೋಹಿತ್ ಶರ್ಮಾ ಮತ್ತು ಅಮಿತ್ ಮಿಶ್ರಾ ಬಿಟ್ಟರೆ ಉಳಿದವರೆಲ್ಲಾ ಕಿರಿಯ ಆಟಗಾರರು.

ವೆಬ್ದುನಿಯಾವನ್ನು ಓದಿ