176 ರನ್ ಬಾರಿಸಿದ ಶೆಹನಾಜ್‌ ಚೆಂಡು ತಲೆಗೆ ತಾಗಿ ಕುಸಿದುಬಿದ್ದರು

ಮಂಗಳವಾರ, 11 ನವೆಂಬರ್ 2014 (18:12 IST)
ನ್ಯೂಜಿಲೆಂಡ್ ವಿರುದ್ಧ ಅಮೋಘ 176 ಅಜೇಯ ರನ್ ಹೊಡೆದಿದ್ದ ಅಹ್ಮದ್ ಶೆಹನಾಜ್  ವೇಗಿ ಆಂಡರ್‌ಸನ್ ಬೌಲಿಂಗ್‌ನಲ್ಲಿ ತಲೆಬುರುಡೆಗೆ ಚೆಂಡು ತಾಗಿ ಬುರುಡೆಯ ಮೂಳೆ ಮುರಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ.   ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ನ್ಯೂಜಿಲೆಂಡ್ ಬೌಲರುಗಳ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

ಯೂನಿಸ್ ಖಾನ್ ಮತ್ತು ಮಿಶಬ್ ಉಲ್ ಹಕ್ 3ಕ್ಕೆ 566 ರನ್‌ಗಳೊಂದಿಗೆ ಪಾಕಿಸ್ತಾನ ಮೇಲುಗೈ ಪಡೆದಿದೆ. ಆದರೆ ದುರದೃಷ್ಟವಶಾತ್ ಶೆಹಜಾದ್‌ ತಲೆಬುರುಡೆ ಒಡೆದು ಉಂಟಾದ ಗಾಯ ಪಾಕ್ ಟೀಂನಲ್ಲಿ ಅಪಾಯದ ಗಂಟೆ ಬಾರಿಸಿದೆ. ನ್ಯೂಜಿಲೆಂಡ್ ವೇಗಿ ಆಂಡರ್‌ಸನ್ ಶಾರ್ಟ್ ಚೆಂಡನ್ನು ಹೊಡೆಯಲು ಹೋಗಿ ತಲೆಯ ಒಂದು ಬದಿಗೆ ಚೆಂಡು ಬಡಿದ ಕೂಡಲೇ ಶೆಹಜಾದ್ ಬ್ಯಾಟ್ ಕೂಡ ವಿಕೆಟ್‌ಗೆ ತಗುಲಿ ಹಿಟ್ ವಿಕೆಟ್ ಔಟಾದರು.

ಆದರೆ ಕೂಡಲೇ ಶೆಹಜಾದ್ ಚೆಂಡು ತಾಗಿದ ರಭಸಕ್ಕೆ ನೆಲಕ್ಕೆ ಕುಸಿದುಬಿದ್ದರು. ಶೆಹಜಾದ್‌ನನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿ ಸ್ಕ್ಯಾನಿಂಗ್‌ನಲ್ಲಿ ಅವರಿಗೆ ತಲೆಬುರುಡೆ ಮೂಳೆ ಮುರಿದಿರುವುದು ತೋರಿಸಿದ್ದು, ಅವರನ್ನು ಮುಂದಿನ 48 ಗಂಟೆಗಳ ಕಾಲ ನಿಗಾ ವಹಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ