ಸ್ಮಿತ್ ಅಮೋಘ ಶತಕ: ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 457

ಶುಕ್ರವಾರ, 19 ಡಿಸೆಂಬರ್ 2014 (10:07 IST)
ಆಸ್ಟ್ರೇಲಿಯಾ ಮೂರನೇ ದಿನವಾದ ಇಂದು 8 ವಿಕೆಟ್ ಕಳೆದುಕೊಂಡು 437 ರನ್ ಗಳಿಸಿದ್ದು, ಉತ್ತಮ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ದಿನದ ಆರಂಭದಲ್ಲಿ ಬ್ಯಾಟಿಂಗ್ ಆರಂಭಿಸಿದಾಗ 4  ಕಳೆದುಕೊಂಡು 221 ರನ್‌ಗಳಿತ್ತು. ನಂತರ ಮೊದಲ ಗಂಟೆಯಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಮಿಚ್ ಮಾರ್ಶ್‌ಗೆ  ಇಶಾಂತ್ ಶರ್ಮಾ ಎಸೆತವು ತಪ್ಪಿಹೋಗಿ ಸ್ಟಂಪ್ ಎಗರಿಸಿತು. ಹ್ಯಾಡಿನ್ ವರುಣ್ ಆರಾನ್ ಅವರ ಶಾರ್ಟ್ ಬಾಲ್  ಆಡಲು ಹೋಗಿ ಪೂಜಾರಾಗೆ ಕ್ಯಾಚಿತ್ತು ಔಟಾದರು.

ಗಾಯಗೊಂಡ ಮೈಕೇಲ್ ಕ್ಲಾರ್ಕ್ ಬದಲಿಗೆ ಬಂದ 25 ವರ್ಷದ ಸ್ಮಿತ್ 110 ರನ್ ಬಾರಿಸಿದರು ಮತ್ತು ಜಾನ್ಸನ್ 53 ಎಸೆತಗಳಲ್ಲಿ 67 ರನ್ ಗಳಿಸಿದರು. ಇದು ಸ್ಮಿತ್ ಅವರ 6ನೇ ಟೆಸ್ಟ್ ಶತಕವಾಗಿದ್ದು, 1975ರಲ್ಲಿ ಗ್ರೆಗ್ ಚಾಪೆಲ್ ನಂತರ ಟೆಸ್ಟ್ ತಂಡದ ನಾಯಕನಾಗಿ ಪ್ರಥಮ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು.

ಸ್ಮಿತ್ ತಮ್ಮ ಸ್ಕೋರಿನಲ್ಲಿ 11 ಬೌಂಡರಿಗಳು ಮತ್ತು ಎರಡು ಸಿಕ್ಸರುಗಳನ್ನು ಗಳಿಸಿದರು. ಆಸ್ಟ್ರೇಲಿಯಾದ ಮೊದಲನೇ ಇನ್ನಿಂಗ್ಸ್‌ನಲ್ಲಿ ಸ್ಪೀವ್ ಸ್ಮಿತ್ ಮತ್ತು ಮಿಚೆಲ್ ಜಾನ್ಸನ್  ಮುರಿಯದ 104 ರನ್ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯನ್ನರು  6 ವಿಕೆಟ್‌ಗೆ 247 ರನ್‌ನಿಂದ ಲಂಚ್ ವೇಳೆಗೆ 6 ವಿಕೆಟ್‌ಗೆ 351 ರನ್ ಸ್ಕೋರ್ ಮಾಡುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡಿದೆ.

ಈಗ ಆಸ್ಟ್ರೇಲಿಯಾ ಭಾರತದ ಸ್ಕೋರನ್ನು ದಾಟಿ 8 ವಿಕೆಟ್ ಕಳೆದುಕೊಂಡು 437 ರನ್ ಗಳಿಸಿದೆ. ಸ್ಮಿತ್ 191 ಎಸೆತಗಳಲ್ಲಿ 133 ರನ್ ಗಳಿಸಿ ಇಶಾಂತ್ ಶರ್ಮಾಗೆ ಬೌಲ್ಡ್ ಆಗಿದ್ದಾರೆ. ಜಾನ್ಸನ್ 93 ಎಸೆತಗಳಲ್ಲಿ 88 ರನ್ ಗಳಿಸಿ ಇಶಾಂತ್ ಎಸೆತದಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು. ಇಶಾಂತ್ ಶರ್ಮಾ 3 ವಿಕೆಟ್ ಕಬಳಿಸಿ ಅಗ್ರಮಾನ್ಯ ಬೌಲರ್ ಎನಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ