ಭಾರತದಲ್ಲಿ ಆಕ್ರಮಣಕಾರಿ ಸ್ಪಿನ್ ಬೌಲರ್ ಕೊರತೆ: ಬ್ರಾಡ್ ಹಾಗ್

ಬುಧವಾರ, 24 ಡಿಸೆಂಬರ್ 2014 (18:39 IST)
ಆಕ್ರಮಣಕಾರಿ ಸ್ಪಿನ್ ಬೌಲರ್ ಕೊರತೆಯಿಂದ ಭಾರತ ತಂಡ ಗೆಲ್ಲುವ ಅವಕಾಶಗಳಿಂದ ವಂಚಿತವಾಗಿದೆ ಎಂದು ಮಾಜಿ ಆಸ್ಟ್ರೇಲಿಯಾದ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.

ಭಾರತದ ಸ್ಪಿನ್ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಕೊರತೆಯಿಂದ ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾ ಒಮ್ಮೆ ಮಾತ್ರ ಆಲೌಟ್ ಆಗಿದೆ ಎಂದು ಹಾಗ್ ಹೇಳಿದರು. ನಾಥನ್ ಲಯನ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್ ಕಬಳಿಸಿದರೆ, ಭಾರತದ ಸ್ಪಿನ್ನರ್‌ಗಳು ಮೂರು ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಮಾತ್ರ ಗಳಿಸಿದ್ದಾರೆ.  

ನಾಥನ್ ಲಯನ್ ಈ ಮೈದಾನಗಳಲ್ಲಿ ಬೌನ್ಸ್ ಅನ್ನು ತನ್ನ ಅನುಕೂಲಕ್ಕೆ ಬಳಸುತ್ತಾರೆ. ಆದರೆ ಭಾರತದ ಸ್ಪಿನ್ನರುಗಳು ಇದಕ್ಕೆ ಒಗ್ಗಿಕೊಂಡಿಲ್ಲ ಎಂದು ಅವರು ಗಮನಸೆಳೆದರು.

ವೆಬ್ದುನಿಯಾವನ್ನು ಓದಿ