ಟೀ ಇಂಡಿಯಾಗೆ ಫೈನಲ್ ಪ್ರವೇಶಿಸುವ ಅವಕಾಶ ಇನ್ನೂ ಇದೆ

ಗುರುವಾರ, 22 ಜನವರಿ 2015 (11:52 IST)
ಎರಡು ಸತತ ಸೋಲುಗಳ ನಂತರ, ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ತ್ರಿಕೋನ ಸರಣಿಯಲ್ಲಿ ಫೈನಲ್  ತಲುಪುವ ಅವಕಾಶ ಇನ್ನೂ ಇದೆ.  ಧೋನಿ ಬಳಗ ಜನವರಿ 26ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಜನವರಿ 30ರಂದು ಇಂಗ್ಲೆಂಡ್ ವಿರುದ್ಧ ಎರಡು ಗೆಲುವುಗಳನ್ನು ಗಳಿಸಲು ನೋಡುತ್ತಿದ್ದು, ಈ ಮೂಲಕ ಫೈನಲ್‌ಗೆ ಲಗ್ಗೆ ಹಾಕಲು ಯೋಜಿಸಿದೆ.

ಆದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರದ ಪಂದ್ಯವು ಭಾರತದ ಹಣೆಬರಹ ನಿರ್ಧರಿಸಲಿದ್ದು, ಬೋನಸ್ ಪಾಯಿಂಟ್‌ಗಳು ಮತ್ತು ನಿವ್ವಳ ರನ್ ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ.
 
 ಆಸ್ಟ್ರೇಲಿಯಾ 9 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ 5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಭಾರತ ಇನ್ನೂ ತನ್ನ ಖಾತೆಯನ್ನು ತೆರೆಯಬೇಕಿದೆ. ಭಾರತ ಉಳಿವಿಗೆ ಅಂಕಗಳ ಲೆಕ್ಕಾಚಾರ ಕೆಳಗಿನಂತಿದೆ
 
 1) ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಬೋನಸ್ ಪಾಯಿಂಟ್‌ನೊಂದಿಗೆ ಗೆದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯವನ್ನು ಹಿಂದಿಕ್ಕಲಿದೆ(10 ಪಾಯಿಂಟ್). ಇಂಗ್ಲೆಂಡ್ ಗೆಲುವು ಅದರ ನಿವ್ವಳ ರನ್ ರೇಟ್‌ಗೆ ಕೂಡ ಉತ್ತೇಜನ ನೀಡುತ್ತದೆ.
 
ಭಾರತ ಬೋನಸ್ ಪಾಯಿಂಟ್‌ಗಳೊಂದಿಗೆ ಎರಡೂ ಪಂದ್ಯಗಳನ್ನು ಗೆದ್ದರೆ, ಅದು ಫೈನಲ್ ಪ್ರವೇಶಿಸುತ್ತದೆ. ಭಾರತ ಬೋನಸ್ ಪಾಯಿಂಟ್‌‍ನೊಂದಿಗೆ ಒಂದು ಪಂದ್ಯ ಗೆದ್ದರೆ, ಇಂಗ್ಲೆಂಡ್ ಜತೆ ಪಾಯಿಂಟ್ 9-9ರೊಂದಿಗೆ ಸಮಗೊಳ್ಳುತ್ತದೆ. ನೆಟ್ ರನ್ ರೇಟ್ ಫೈನಲಿಸ್ಟ್ ನಿರ್ಧರಿಸುತ್ತದೆ. ಭಾರತ ಬೋನಸ್ ಪಾಯಿಂಟ್‌ನೊಂದಿಗೆ ಎರಡೂ ಪಂದ್ಯಗಳನ್ನು ಗೆದ್ದರೆ ಅದು 10 ಪಾಯಿಂಟ್ ಗಳಿಸಲಿದ್ದು, ಎರಡನೇ ಫೈನಲ್ ತಂಡವನ್ನು ರನ್ ರೇಟ್ ನಿರ್ಧರಿಸುತ್ತದೆ.

ಭಾರತ ಕೇವಲ ಒಂದು ಬೋನಸ್ ಪಾಯಿಂಟ್ ಪಡೆಯಲು ಸಾಧ್ಯವಾದರೆ, ಎಲ್ಲಾ ತಂಡಗಳು 9 ಪಾಯಿಂಟ್ ಸಮ ಸ್ಕೋರ್ ಮಾಡಲಿದ್ದು ಪುನಃ ನೆಟ್ ರನ್ ರೇಟ್ ಪಾತ್ರವಹಿಸುತ್ತದೆ.  ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಫೈನಲ್‌ನಲ್ಲಿ ಸ್ಥಾನ ಗಟ್ಟಿಯಾಗುತ್ತದೆ.

ಈ ಸನ್ನಿವೇಶದಲ್ಲಿ ಭಾರತಕ್ಕೆ ಎರಡು ಜಯ ಸಿಕ್ಕರೆ ಇಂಗ್ಲೆಂಡ್ ಅನ್ನು ಸ್ಪರ್ಧೆಯಿಂದ ಹೊರದೂಡುತ್ತದೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತರೆ, ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಗ್ರೂಪ್ ಪಂದ್ಯ ಅಕ್ಷರಶಃ ಸೆಮಿ ಫೈನಲ್ ಆಗಿರುತ್ತದೆ. ಭಾರತ ಬೋನಸ್ ಪಾಯಿಂಟ್ ಗಳಿಸಿ ನೆಟ್ ರನ್ ರೇಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕುವುದನ್ನು ಖಾತರಿಪಡಿಸಿಕೊಳ್ಳಬೇಕು

ವೆಬ್ದುನಿಯಾವನ್ನು ಓದಿ