ಟೆಸ್ಟ್ ಕ್ರಿಕೆಟ್: ಧೋನಿ ಪಡೆಗೆ ಫಾಲೋಆನ್ ಸೋಲಿನ ಭೀತಿ

ಬುಧವಾರ, 30 ಜುಲೈ 2014 (13:52 IST)
ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 3 ನೇ ದಿನದ ಅಂತ್ಯಕ್ಕೆ 8 ವಿಕೆಟ್‌ಗೆ 323 ರನ್‌ಗಳಿಸಿದೆ.
 
ಆತಿಥೇಯ ಇಂಗ್ಲೆಂಡಿಗೆ ಧಾರಾಳ ರನ್‌ ಬಿಟ್ಟುಕೊಟ್ಟ ಬಳಿಕ ತಾನೇ ಈಗ ರನ್‌ ಪೇರಿಸಲು ಪರದಾಡುತ್ತಿದೆ. ಒಟ್ಟಾರೆಯಾಗಿ ಭಾರತ ಬ್ಯಾಟಿಂಗ್‌ ಜಾರಿದ್ದು ಪ್ರವಾಸಿಗರ ಮೇಲೆ ಫಾಲೋ ಆನ್‌ ಭೀತಿಗೆ ಇನ್ನೂ 47 ರನ್‌ಗಳಿಸಬೇಕಾಗಿದೆ .
 
ಆರ್ಧಶತಕ ಬಾರಿಸಿರುವ ಧೋನಿ ಹಾಗೂ 4 ರನ್‌ಗಳಿಸಿರುವ ಮೊಹಮದ್‌ ಸಮಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.
 
ಇಂಗ್ಲೆಂಡ್‌ ಮೊದಲ ಇನ್ಸಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 569ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದೆ.
 
ಭಾರತ ಆತಿಥೇಯ ಇಂಗ್ಲೆಂಡ್‌ಗಿಂತ 246 ರನ್‌ ಹಿನ್ನೆಡೆಯಲ್ಲಿದೆ .

ವೆಬ್ದುನಿಯಾವನ್ನು ಓದಿ