ಐಪಿಎಲ್ ಕುರಿತು ಬಾಥಮ್ ಟೀಕೆ ಅಸಂಬದ್ಧ: ಬಿಸಿಸಿಐ

ಶುಕ್ರವಾರ, 5 ಸೆಪ್ಟಂಬರ್ 2014 (18:15 IST)
ಇಂಗ್ಲೆಂಡ್ ಆಟಗಾರ ಐಯಾನ್ ಬಾಥಮ್ ಅವರು ಅತ್ಯಂತ ಲಾಭದಾಯಕ ಐಪಿಎಲ್ ಕುರಿತು ಮಾಡಿದ ಟೀಕೆಯನ್ನು ಬಿಸಿಸಿಐ ಅಸಂಬದ್ಧ ಎಂದು ತಳ್ಳಿಹಾಕಿದೆ. ಅವರಿಗೆ ಹಾಗೆ ಹೇಳುವುದಕ್ಕೆ ಅಧಿಕಾರವಿಲ್ಲ ಮತ್ತು ಟ್ವೆಂಟಿ 20 ಲೀಗ್ ಬಗ್ಗೆ ಕಾಮೆಂಟ್ ಮಾಡುವುದಕ್ಕೆ ಮೊದಲು ಸತ್ಯಾಂಶಗಳನ್ನು ತಿಳಿದುಕೊಳ್ಳಲಿ ಎಂದು ಬಿಸಿಸಿಐ ಹೇಳಿದೆ.
 
ಇತರೆ ಕ್ರಿಕೆಟ್ ಮಂಡಳಿಗಳ ಆಟಗಾರರು ಐಪಿಎಲ್‌ನಲ್ಲಿ ಆಡುವುದರಿಂದ ಅದಕ್ಕೆ ಪ್ರತಿಯಾಗಿ ಆ ಮಂಡಳಿಗಳಿಗೆ  ಬಿಸಿಸಿಐ 10 ದಶಲಕ್ಷ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಹೇಳಿದ್ದಾರೆ.

ಐಪಿಎಲ್ ಜಗತ್ತಿನ ಅತ್ಯುತ್ತಮ ಆಟಗಾರರನ್ನು 2 ತಿಂಗಳ ಕಾಲ ಹೊಂದಿ ಈ ಆಟಗಾರರರನ್ನು ಬೆಳಕಿಗೆ ತಂದ ಕ್ರಿಕೆಟ್ ಮಂಡಳಿಗಳಿಗೆ ಒಂದು ಪೆನ್ನಿಯನ್ನು ನೀಡದಿರುವುದು ಯಾವ ನ್ಯಾಯ ಎಂದು ಬೋಥಾಮ್ ಪ್ರಶ್ನಿಸಿದ್ದರು.ಆಟದ ದೀರ್ಘಾವಧಿಯ ಒಳಿತಿಗೆ ಹಾನಿಯಾಗುವುದರಿಂದ ಮತ್ತು ಫ್ರಾಂಚೈಸಿ ಆಧಾರದ ಲೀಗ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್‌ಗೆ ಪರಿಪೂರ್ಣ ಅವಕಾಶ ಒದಗಿಸುವುದರಿಂದ ಆಟಗಾರರು ಅದಕ್ಕೆ ಗುಲಾಮರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿ ರದ್ದುಮಾಡಬೇಕು ಎಂದು ಬೋಥಾಮ್ ಪ್ರತಿಪಾದಿಸಿದ್ದರು. ಐಪಿಎಲ್ ಇರಲೇಬಾರದೆಂದು ನಾನು ಭಾವಿಸುತ್ತೇನೆ. ಇದು ವಿಶ್ವಕ್ರಿಕೆಟ್ ಆದ್ಯತೆಗಳನ್ನು ಬದಲಿಸುತ್ತಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಬೋಥಾಮ್ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ