ಮಿಷಬ್ ಉಲ್ ಹಕ್, ಧೋನಿ ನಾಯಕತ್ವ ನಡುವೆ ಹೋಲಿಕೆ ಸರಿಯಲ್ಲ: ಮಲ್ಲಿಕ್

ಶನಿವಾರ, 23 ಆಗಸ್ಟ್ 2014 (19:48 IST)
ಮಿಷಬ್ ಉಲ್ ಹಕ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ನಡುವೆ ಹೋಲಿಕೆ ಮಾಡುವುದು ಸಂಪೂರ್ಣವಾಗಿ ಸರಿಯಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಶೋಯಬ್ ಮಲ್ಲಿಕ್ ಹೇಳಿದ್ದಾರೆ. ಶ್ರೀಲಂಕಾ ಮತ್ತು ಇಂಗ್ಲೆಂಡ್‌ನಲ್ಲಿ ಕ್ರಮವಾಗಿ ಪಾಕಿಸ್ತಾನ ಮತ್ತು ಭಾರತ ಸೋಲಿನಿಂದ  ಮಿಶಬ್ ಮತ್ತು ಧೋನಿಯನ್ನು ಬದಲಿಸಬೇಕೆಂದು ಟೀಕಾಕಾರರು ಮತ್ತು ಕೆಲವು ಮಾಜಿ ಆಟಗಾರರ ಒತ್ತಡವನ್ನು ಕುರಿತು ಕೇಳಿದಾಗ, ಪ್ರತಿಯೊಬ್ಬ ನಾಯಕ ಕೆಟ್ಟ ಸರಣಿಯನ್ನು ಆಡುತ್ತಾನೆ.

ಆದರೆ ಇವರಿಬ್ಬರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಧೋನಿ ಪ್ರತಿಯೊಂದು ಮುಖ್ಯ ಐಸಿಸಿ ಪ್ರಶಸ್ತಿಯನ್ನು ಗೆದ್ದಿದ್ದಾನೆ ಮತ್ತು ಮಿಷಬ್ ಆ ಸಾಧನೆ ಮಾಡಿಲ್ಲ ಎಂದು ಜಿಯೋ ಸೂಪರ್ ಚಾನೆಲ್ ಟಾಕ್‌ಶೋನಲ್ಲಿ ಶೋಯಬ್ ಹೇಳಿದ್ದಾರೆ.

ಮಿಶಬ್ ಉತ್ತಮ ನಾಯಕನಾಗಿದ್ದು, ಬ್ಯಾಟಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಆದರೆ 2015ರ ವಿಶ್ವಕಪ್ ನಾಯಕತ್ವದ ಅಂತಿಮ ನಿರ್ಧಾರವನ್ನು ಪಾಕ್ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ