ಅತೀ ವೇಗದಲ್ಲಿ 12,000 ಟೆಸ್ಟ್ ರನ್: ಸಚಿನ್ ದಾಖಲೆ ಮುರಿದ ಸಂಗಕ್ಕರಾ

ಶನಿವಾರ, 3 ಜನವರಿ 2015 (16:06 IST)
ಶ್ರೀಲಂಕಾದ ಕುಮಾರ ಸಂಗಕ್ಕರಾ ನ್ಯೂಜಿಲೆಂಡ್ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಶನಿವಾರ ಸಂಗಕ್ಕರಾ ಅತೀ ವೇಗದಲ್ಲಿ 12,000 ಟೆಸ್ಟ್ ರನ್‌ಗಳನ್ನು ಮುಟ್ಟುವ ಮೂಲಕ ತೆಂಡೂಲ್ಕರ್ ದಾಖಲೆಯನ್ನು ಮುರಿದರು.

37 ವರ್ಷ ವಯಸ್ಸಿನ ಎಡಗೈ ಆಟಗಾರ ಈ ಗುರಿಯನ್ನು ಮುಟ್ಟಲು 224 ಇನ್ನಿಂಗ್ಸ್ ತೆಗೆದುಕೊಂಡರು. ಇನ್ನಿಂಗ್ಸ್‌ನ 13ನೇ ಓವರಿನಲ್ಲಿ ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ 2 ರನ್ ತೆಗೆದುಕೊಂಡು ದಾಖಲೆ ಮಾಡಿದರು.

ತೆಂಡೂಲ್ಕರ್ ಮೊಹಾಲಿಯಲ್ಲಿ ತಮ್ಮ 247ನೇ ಇನ್ನಿಂಗ್ಸ್‌ನಲ್ಲಿ 12,000 ಗಡಿ ದಾಟುವ ಮೂಲಕ 2008ರಿಂದ ದಾಖಲೆ ನಿರ್ಮಿಸಿದ್ದರು. ಆದರೆ ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ಹೆಸರಿನಲ್ಲಿ ಟೆಸ್ಟ್‌ಗಳಲ್ಲಿ 13, 14 ಮತ್ತು 15,000 ರನ್‌ಗಳನ್ನು ವೇಗವಾಗಿ ಮುಟ್ಟಿದ ದಾಖಲೆ ಇನ್ನೂ ಇದೆ.

ವೆಬ್ದುನಿಯಾವನ್ನು ಓದಿ