ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್

ಸೋಮವಾರ, 21 ಜುಲೈ 2014 (12:04 IST)
ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸವನ್ನು ಕಳಪೆಯಾಗಿ ಆರಂಭಿಸಿದ್ದು, ತಮ್ಮ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್‌ಗಳನ್ನು ಹೊಡೆದಿದ್ದಾರೆ. ಪ್ರತಿಬಾರಿ ಅವರು ಬ್ಯಾಟಿಂಗ್‌ಗೆ ಇಳಿದಾಗಲೂ ಕಳಪೆಯಾಗಿ ಆಡಿದ್ದು, ಗವಾಸ್ಕರ್ ಅವರಿಗೆ ಈಗಲೇ ಅಪಾಯದ ಗಂಟೆ ಒತ್ತುವುದಕ್ಕೆ ಇಷ್ಟವಲ್ಲ.

ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ಕಳಪೆ ಆಟ ಆಡುವುದು ಆಟದ ಒಂದು ಭಾಗವಾಗಿದೆ. ಇವೆರಡು ಟೆಸ್ಟ್ ಪಂದ್ಯಗಳು ಅವರ ಕಳಪೆ ಸಾಧನೆಯಾಗಿರಬಹುದು. ಕೊಹ್ಲಿ ಅವರು ಅದ್ಭುತ ದಾಖಲೆ ಮಾಡಿರುವುದು ಮತ್ತು ಹಿಂದೆ ಸತತ ಫಾರಂನಲ್ಲಿರುವುದು ಅವರಿಗೆ ನೆರವಾಗಬಹುದು ಎಂದು ಗವಾಸ್ಕರ್ ನಂಬಿದ್ದಾರೆ.

ವಿರಾಟ್ ಉತ್ತಮ ಆಟಗಾರ. ಆದರೆ ಅವರಿಗೆ ಅದೃಷ್ಟ ಕೈಕೊಡುತ್ತಿದೆ ಎಂದು ಗವಾಸ್ಕರ್ ಹೇಳಿದರು.ಕೊಹ್ಲಿ ಇದುವರೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ  1, 8 ಮತ್ತು 25 ರನ್ ಹಾಗೂ 0 ರನ್ ಗಳಿಸಿ ಕಳಪೆ ಸಾಧನೆಮಾಡಿದ್ದಾರೆ. ಅವರು ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಹೊಡೆದಿದ್ದಾರೆ. 

ವೆಬ್ದುನಿಯಾವನ್ನು ಓದಿ