2015ರ ವಿಶ್ವಕಪ್ ಕ್ರಿಕೆಟ್: ಪಂದ್ಯಗಳ ವೇಳಾಪಟ್ಟಿ

ಬುಧವಾರ, 26 ನವೆಂಬರ್ 2014 (13:45 IST)
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2015ರಲ್ಲಿ ನಡೆಯಲಿರುವ ವಿಶ್ವ ಕಪ್ ಕ್ರಿಕೆಟ್ ಪಂದ್ಯದ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದು, 14 ತಂಡಗಳು ಪಂದ್ಯಗಳಲ್ಲಿ ಭಾಗವಹಿಸಲಿವೆ. ಈ ಎಲ್ಲಾ ತಂಡಗಳನ್ನು ಪೂಲ್ ಎ ಮತ್ತು ಪೂಲ್ ಬಿ ಎಂದು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 
 
ಎ ತಂಡದಲ್ಲಿರುವ ತಂಡಗಳೆಂದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲ್ಯಾಂಡ್, ಬಾಂಗ್ಲಾದೇಶ್, ಆಫ್ಘಾನಿಸ್ತಾನ್ ಹಾಗೂ ಸ್ಕಾಟ್ ಲ್ಯಾಂಡ್‌ಗಳಿದ್ದರೆ. ಅಂತೆಯೇ ಬಿ ಗುಂಪಿನ ತಂಡಗಳಲ್ಲಿ ಭಾರತವೂ ಒಳಗೊಂಡಂತೆ ಪಾಕಿಸ್ತಾನ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಂಬ್ವೆ, ಐರ್ಲೆಂಡ್ ಹಾಗೂ ಅರಬ್ ತಂಡಗಳು ಭಾಗವಹಿಸಲಿವೆ. 
 
2015ರ ಫೆಬ್ರವರಿ 14ರಿಂದ ವಿಶ್ವಕಪ್ ಆರಂಭಗೊಳ್ಳಲಿದ್ದು, ಮೊದಲ ಪಂದ್ಯವು ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ಕ್ರಿಸ್ ಚರ್ಚ್ ನ ಹಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ಮಾರ್ಚ್ 29ರಂದು ನಡೆಯಲಿದೆ. 
 
ಈ ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡಿನಾದ್ಯಂತ 14 ಪ್ರತಿಷ್ಟಿತ ನಗರಗಳ ಸುಸಜ್ಜಿತ ಕ್ರೀಡಾಂಗಣಗಳಲ್ಲಿ ನಡೆಯಲಿವೆ. 
 
ಪಂದ್ಯ ನಡೆಯಲಿರುವ ಸ್ಥಳಗಳು: 
 
ಆಸ್ಟ್ರೇಲಿಯಾ: ಅಡೆಲೈಡ್, ಬ್ರಿಸ್ಬೇನ್, ಮೆಲ್ಬೋರ್ನ್, ಕ್ಯಾನ್ಬೆರಾ, ಹೋಬರ್ಟ್, ಪೆರ್ತ್, ಸಿಡ್ನಿ.
 
ನ್ಯೂಜಿಲ್ಯಾಂಡ್: ಆಕ್ಲ್ಯಾಂಡ್, ವಿಲ್ಲಿಂಗ್ಟನ್, ಕ್ರಿಸ್ಟ್ ಚರ್ಚ್, ಹಮಿಲ್ಟನ್, ನಾಪೀರ್, ನೆಲ್ಸನ್, ಡ್ಯುನೆಡಿನ್. 
 
ಪಂದ್ಯಗಳ ಆರಂಭದಲ್ಲಿ ಎ ಗುಂಪಿನ ತಂಡದಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ಗಳು ತಂಡಗಳು ಅಖಾಡಕ್ಕಿಳಿದರೆ, ಇನ್ನು ಬಿ ಗುಂಪ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬ್ವೆ ತಂಡಗಳು ಎದುರಾಳಿಯಾಗಲಿವೆ. ಇನ್ನು ಭಾರತವು ತನ್ನ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ 2015ರ ಫೆಬ್ರವರಿ 15ರಂದು ಆಸ್ಟ್ರೇಲಿಯಾದ ಅಡೆಲೈಡ್ ಕ್ರೀಡಾಂಗಣದಲ್ಲಿ ಹಣಾಹಣಿ ನಡೆಸಲಿದೆ 

ವೆಬ್ದುನಿಯಾವನ್ನು ಓದಿ