‘ದೆಹಲಿ ಪೊಲೀಸರು ನನ್ನನ್ನು ಭಯೋತ್ಪಾದಕರಂತೆ ಟ್ರೀಟ್ ಮಾಡಿದರು’

ಶನಿವಾರ, 4 ಫೆಬ್ರವರಿ 2017 (08:46 IST)
ಕೊಚ್ಚಿ: ಸದ್ಯ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತನಾಗಿ ಟೀಂ ಇಂಡಿಯಾಕ್ಕೆ ಬರಲು ಹವಣಿಸುತ್ತಿರುವ ಕೇರಳ ಮೂಲದ ಟೀಂ ಇಂಡಿಯಾ ಮಾಜಿ ವೇಗಿ ಎಸ್. ಶ್ರೀಶಾಂತ್ ತಮ್ಮ ಹಳೆಯ ಕರಾಳ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

 
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅರೆಸ್ಟ್ ಆದಾಗ ತಮ್ಮನ್ನು ಪೊಲೀಸರು ನಡೆಸಿಕೊಂಡ ರೀತಿಯನ್ನು ಅವರು ವಿವರಿಸಿದ್ದಾರೆ. ‘ನಾನು ನಿಜವಾಗಿ ಆ ಸಂದರ್ಭದಲ್ಲಿ ಮದ್ಯ ಪಾನ ಮಾಡಿರಲಿಲ್ಲ. ಆದರೂ ಆ ಆರೋಪ ಹೊರಿಸಿದರು. ನನ್ನನ್ನು ಯಾಕೆ ಅರೆಸ್ಟ್ ಮಾಡುತ್ತಿದ್ದಾರೆ ಎಂಬುದನ್ನೂ ಹೇಳಲಿಲ್ಲ. ವಾರೆಂಟ್ ಇಲ್ಲದೇ ಬುಲೆಟ್ ಪ್ರೂಫ್ ವಾಹನದಲ್ಲಿ 70 ಜನ  ಕಮಾಂಡೋಗಳಿದ್ದ ಗುಂಪು ನನ್ನನ್ನು ದೆಹಲಿಗೆ ವಿಚಾರಣೆಗೆ ಕರೆದೊಯ್ದಿತು.

ಜೈಲಿನಲ್ಲಿ ಅಪರಾಧಿಗಳೊಂದಿಗೆ ಕಳೆದ 27 ದಿನಗಳು ನಿಜಕ್ಕೂ ಕರಾಳ. ನಾನು ದಾವೂದ್ ಜತೆ ಸಂಭಾಷಣೆ ನಡೆಸಿದ್ದೆ ಎಂದೆಲ್ಲಾ ಆರೋಪಿಸಲಾಗಿತ್ತು. ನನ್ನ ಫೋನ್ ನ್ನು ಅವರು ಕಿತ್ತುಕೊಂಡಿದ್ದರು. ನನಗೆ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿರಲಿಲ್ಲ’ ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.

2013 ರ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಶ್ರೀಶಾಂತ್ ಹಾಗೂ ಇನ್ನಿಬ್ಬರು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿತರಾಗಿದ್ದಲ್ಲದೆ, ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ