‘ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಕ್ಕೇ ನನ್ನ ಮಗನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದ್ದು’

ಗುರುವಾರ, 12 ಜನವರಿ 2017 (09:02 IST)
ನವದೆಹಲಿ: ಕೊನೆಗೂ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಅವರು ಹೋಗುತ್ತಿದ್ದಂತೆ ನನ್ನ ಮಗನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿತು ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಧೋನಿ ವಿರುದ್ಧ ಹರಿಹಾಯ್ದಿದ್ದಾರೆ.
 

ಒಂದೆಡೆ ಯುವರಾಜ್ ಧೋನಿ ಜತೆ ಚಿಟ್ ಚಾಟ್ ನಡೆಸಿದ ವಿಡಿಯೋ ಅಪ್ ಲೋಡ್ ಮಾಡಿ ನಾವಿಬ್ಬರೂ ಫ್ರೆಂಡ್ಸ್ ಎಂದು ಹೆಗಲಿಗೆ ಕೈಯಿಟ್ಟುಕೊಂಡು ಪೋಸ್ ಕೊಡುತ್ತಿದ್ದಾರೆ. ಇನ್ನೊಂದೆಡೆ ಯುವಿ ತಂದೆ ಧೋನಿ ವಿರುದ್ಧ ಮತ್ತೆ ಸಿಡಿದಿದ್ದಾರೆ.

ಹಿಂದೆಯೇ ನಾನು ಹೇಳಿದ್ದೆ. ಧೋನಿ ರಾಜೀನಾಮೆ ನೀಡಿದರೆ ನನ್ನ ಮಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಾನೆ. ಆತ ಆಯ್ಕೆಯಾಗದಿರಲು ಕಾರಣ ಧೋನಿ ಎಂದು. ಈಗ ನೀವೇ ನೋಡಿದಿರಲ್ಲ ಎಂದು ಯೋಗರಾಜ್ ಹೇಳಿಕೊಂಡಿದ್ದಾರೆ.

ಹಿಂದೆ ಹಲವು ಬಾರಿ ಯೋಗರಾಜ್ ತಮ್ಮ ಮಗನ ಕ್ರಿಕೆಟ್ ಜೀವನ ಕುಂಠಿತಗೊಳ್ಳಲು ಧೋನಿಯೇ ಕಾರಣ ಎಂದು ಆಪಾದಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಯುವಿಯೇ ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ಮಗ ಆಯ್ಕೆಯಾದ ಖುಷಿಗೆ ಮತ್ತೊಮ್ಮೆ ಧೋನಿಗೆ ಯೋಗರಾಜ್ ಜಾಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ