ಕೋಲ್ಕೊತ್ತಾ: ಭಾರತದ ವಿರುದ್ಧ ದ್ವಿತೀಯ ಪಂದ್ಯ ಆಡಲಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ವಿಶೇಷ ಏಕದಿನ ಪಂದ್ಯವಾಗಲಿದೆ. ಯಾಕೆಂದರೆ ನಾಯಕ ಸ್ಟೀವ್ ಸ್ಮಿತ್ ಗೆ ಇದು 100 ನೇ ಏಕದಿನ ಪಂದ್ಯ.
2010 ರ ಫೆಬ್ರವರಿಯಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಸ್ಟೀವ್ ಸ್ಮಿತ್ ಇಂದು ವಿಶ್ವ ಕ್ರಿಕೆಟಿಗರ ಪೈಕಿ ಅತ್ಯುತ್ತಮ ಆಟಗಾರರ ಸಾಲಿಗೆ ಸೇರಿದ್ದಾರೆ. ಮೊದಲು ಬೌಲರ್ ಆಗಿ ಪರಿಚಯವಾಗಿದ್ದ ಸ್ಮಿತ್, ಬೌಲಿಂಗ್ ನಲ್ಲಿ ಯಶಸ್ವಿಯಾಗದ ಕಾರಣ, ಬ್ಯಾಟಿಂಗ್ ಕಡೆಗೆ ಗಮನಕೊಟ್ಟು ಯಶಸ್ವಿಯಾದರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯಂತೆ 3 ನೇ ಕ್ರಮಾಂಕದ ಅದ್ಭುತ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್. ಮೊದಲ ಏಕದಿನ ಸೋತು ಹತಾಶೆಯಲ್ಲಿರುವ ಆಸ್ಟ್ರೇಲಿಯಾ ತಂಡ ನಾಯಕನ ದಾಖಲೆಯ ಪಂದ್ಯದಲ್ಲಾದರೂ ಗೆಲ್ಲುವ ವಿಶ್ವಾಸದಲ್ಲಿದೆ.