31 ಎಸೆತಗಳಲ್ಲಿ ಶತಕ ಸಿಡಿಸಿದ ಡಿವಿಲಿಯರ್ಸ್

ಸೋಮವಾರ, 19 ಜನವರಿ 2015 (09:25 IST)
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ವೇಳೆ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ನೂತನ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 36 ಎಸೆತಗಳಲ್ಲಿ ಶತಕ ಸಿಡಿಸಿದ್ದ ನ್ಯೂಜಿಲೆಂಡ್ ಆಟಗಾರ ಕೋರಿ ಆಂಡರ್ಸನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ನ್ಯೂವಾಂಡರರ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡಿವಿಲಿಯರ್ಸ್ ಸೇರಿದಂತೆ ಒಟ್ಟು ಮೂವರು ಆಟಗಾರರು ಶತಕ ಸಿಡಿಸಿದರು. 
 
ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ಡಿವಿಲಿಯರ್ಸ್ ಲಂಕಾದ ಸನತ್ ಜಯಸೂರ್ಯ ಹೆಸರಲ್ಲಿದ್ದ ವೇಗದ ಅರ್ಧಶತಕದ ದಾಖಲೆಯನ್ನು ಕೂಡ ಅಳಿಸಿ ಹಾಕಿದರು. 
 
 16 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ ಕೇವಲ 44 ಬಾಲ್‌ಗಳಲ್ಲಿ 149 ರನ್ ಗಳಿಸದ ಅವರು 150ರ ಗಡಿ ದಾಟುವಲ್ಲಿ ವಿಫಲರಾದರು.
 
ಹಶೀನ್ ಆಮ್ಲಾ ಮತ್ತು ರಿಲೀ ರೊಸ್ಸೋ ಸಹ ಡಿವಿಲಿಯರ್ಸ್‌ಗೆ ಉತ್ತಮ ಸಾಥ್ ನೀಡಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಅವರಿಬ್ಬರು ಕ್ರಮವಾಗಿ 153  ಮತ್ತು 128 ರನ್ ಗಳಿಸಿದರು ಈ ಮೂವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 439 ರನ್ ಗಳಿಸಿತು.
 
ನಂತರ ಬ್ಯಾಟಿಂಗ್‌ಗಿಳಿದ ವಿಂಡೀಸ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 291 ರನ್ ಗಳಿಸಿ ಸೋಲುಂಡಿತು. 

ವೆಬ್ದುನಿಯಾವನ್ನು ಓದಿ